Home ಸ್ಥಳೀಯ ಕಲೆಗೆ ಜೀವ ತುಂಬುವ ಶಕ್ತಿ ಬಣ್ಣಕ್ಕಿದೆ : ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ಕಲೆಗೆ ಜೀವ ತುಂಬುವ ಶಕ್ತಿ ಬಣ್ಣಕ್ಕಿದೆ : ಸಂಸದೆ ಪ್ರಿಯಾಂಕಾ ಜಾರಕಿಹೊಳಿ

0
ಕಲೆಗೆ ಜೀವ ತುಂಬುವ ಶಕ್ತಿ ಬಣ್ಣಕ್ಕಿದೆ : ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ಗೋಕಾಕ : ಕಲೆಗೆ ಜೀವ ತುಂಬುವ ಶಕ್ತಿ ಬಣ್ಣಕ್ಕಿದೆ. ಚಿತ್ರಕಲೆ ಪ್ರತಿಯೊಬ್ಬರಲ್ಲಿ ಅಡಗಿರುತ್ತವೆ. ಅದನ್ನು ಅಭಿವ್ಯಕ್ತಗೊಳಿಸಿದಾಗ ದೃಶ್ಯಮಾಧ್ಯಮವಾಗಿ ಅನಾವರಣಗೊಳ್ಳುತ್ತವೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ಸತೀಶ್ ಶುಗರ್ಸ ಅಕಾಡೆಮಿ ಶಾಲಾ ಆವರಣದಲ್ಲಿ ಬಾನುವಾರ ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು, ನಾಯಕ ಸ್ಟೂಡೆಂಟ್ ಫೆಡರೇಷನ್ ಗೋಕಾಕ ಹಾಗೂ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯ ಗೋಕಾಕ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ” ನಿಮ್ಮೊಂದಿಗೆ ನಾವು” ಕಲಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೃಶ್ಯಕಲೆಯಲ್ಲಿ ಮಾತನಾಡುವ ಶಕ್ತಿ, ಭಾವ, ಬಣ್ಣ ಹಾಗೂ ಜೀವವಿದೆ ಸಹೃದಯಿಗಳು ಆ ದಷ್ಟಿಯಿಂದ ನೋಡಿದಾಗ ಅರ್ಥವಾಗುತ್ತದೆ. ಅಕಾಡೆಮಿ ಇಂಥ ಕಾರ್ಯಕ್ರಮ ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುತ್ತಿರುವುದು ಶ್ಲಾಘನೀಯವಾಗಿದ್ದು, ದಶ್ಯಕಲೆಯು ಎಲ್ಲ ವಿಷಯಕಿಂತ ಸರಳವಾಗಿ ತಿಳಿದುಕೊಳ್ಳುವ ವಿಷಯವಾಗಿದೆ. ಸಮಾಜದಲ್ಲಿ ಪ್ರತಿಯೊಂದು ರಂಗದಲ್ಲಿ ಸಹ ಚಿತ್ರಕಲೆ ಅಗತ್ಯವಾಗಿದೆ ಎನ್ನುತ್ತ, ಇಂತಹ ಕಲಾ ಶಿಬಿರಗಳಲ್ಲಿ ಮಕ್ಕಳು ಆಸಕ್ತಿಯಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸಬೇಕು. ಈ ಭಾಗದ ಮಕ್ಕಳು ಮುಂದೆ ಬಂದು ಗೋಕಾಕ ನಾಡಿನ ಕೀರ್ತಿಯನ್ನು ರಾಜ್ಯಾದ್ಯಂತ ಹರಡಿಸಬೇಕು. ಈಗಾಗಲೇ ತಂದೆ ಸತೀಶ ಜಾರಕಿಹೊಳಿ ಅವರು ಕಳೆದ 2 ದಶಕದಿಂದ ಸತೀಶ್ ಶುರ್ಗಸ್ ಆವಾರ್ಡ್ಸ ಮೂಲಕ ಸಾಕಷ್ಟು ವಿದ್ಯಾರ್ಥಿಗಳನ್ನು ಬೆಳೆಸುತ್ತಿದ್ದಾರೆ ಇದರ ಸದುಪಯೋಗ ಪ್ರತಿಯೊಬ್ಬ ವಿದ್ಯಾರ್ಥಿ ಪಡೆದುಕೊಳ್ಳಬೇಕು. ‌ಆಧುನಿಕ ಕಾಲದಲ್ಲಿ ನಾವು ಅಂದುಕೊಂಡಿದನ್ನು ಸಾಧಿಸಬಹುದು. ಮಕ್ಕಳ ತಮಗೆ ಅಭಿರುಚಿ ಇದ್ದ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಸಾಧಕರಾಗಬೇಕು. ಆಧುನಿಕ ತಂತ್ರಜ್ಞಾನದ ಸಹಾಯ ಪಡೆದುಕೊಂಡು ತಮ್ಮ ಪ್ರತಿಭೆಯನ್ನು ಸಮಾಜಕ್ಕೆ ಧಾರೆಯರೆಬೇಕು ಎಂದು ಹೇಳಿದರು.

ಸಾಹಿತಿ, ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಜಯಾನಂದ ಮಾದರ ಮಾತನಾಡಿ, ಬದುಕನ್ನು ಕಟ್ಟಿಕೊಡುವ ಶಕ್ತಿ ಕಲೆಗೆ ಇದೆ. ಮಕ್ಕಳು ನಮ್ಮ ದೇಶದ ಸಂಪತ್ತು, ಕಲೆ, ಸಾಹಿತ್ಯವನ್ನು ಜೀವಂತವಾಗಿ ಇಡುವವರೆ ಮಕ್ಕಳು ಹಾಗಾಗಿ ನಿಮ್ಮಗಾಗಿ ಇಂತಹ ಶಿಬಿರಗಳನ್ನು ಕರ್ನಾಟಕ ಲಲಿತಾಕಲಾ ಅಕಾಡೆಮಿ ಹಮ್ಮಿಕೊಂಡಿದೆ ಅದರ ಸದುಪಯೋಗ ಪಡೆದುಕೊಳ್ಳಬೇಕು. ಕಲೆ, ಸಂಸ್ಕೃತಿ ಉಳಿಸಿ, ಬೆಳೆಸುವ ಬಹುದೊಡ್ಡ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಆ ದಿಸೆಯಲ್ಲಿ ವಿದ್ಯಾರ್ಥಿಗಳ ಮುಂದೆ ಬಂದು ಆಸಕ್ತರಾಗಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಲಾ ಶಿಬಿರದಲ್ಲಿ ಭಾಗವಹಿಸಿ ಚಿತ್ರಕಲೆಯನ್ನು ಬಿಡಿಸಿದ ವಿದ್ಯಾರ್ಥಿಗಳಿಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಪ್ರಮಾಣಪತ್ರ ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಹಿರಿಯ ಕಲಾವಿದ ಬಾಬುರಾವ್ ನಡೋಣಿ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯೆ ಆಷಾರಾಣಿ ನಡೋಣಿ, ಡಾ.ಲಕ್ಷ್ಮಣ ಚೌರಿ, ಪಿ.ಎಂ ಲಕ್ಷೆಟ್ಟಿ, ಶಿಕ್ಷಕಿ ವಿದ್ಯಾ ರೆಡ್ಡಿ, ಹೀರಾಚಂದ ಪೂಜೇರಿ ಹಾಗೂ ಇತರರು ಇದ್ದರು.

LEAVE A REPLY

Please enter your comment!
Please enter your name here