Home ರಾಜಕೀಯ ಕೈಗಾರಿಕೋದ್ಯಮದಲ್ಲಿ 9,823.31 ಕೋಟಿ ರೂಪಾಯಿ ಹೂಡಿಕೆ; 5,605 ಉದ್ಯೋಗಗಳನ್ನು ಸೃಷ್ಟಿ! ಸಿದ್ದರಾಮಯ್ಯ ಘೋಷಣೆ

ಕೈಗಾರಿಕೋದ್ಯಮದಲ್ಲಿ 9,823.31 ಕೋಟಿ ರೂಪಾಯಿ ಹೂಡಿಕೆ; 5,605 ಉದ್ಯೋಗಗಳನ್ನು ಸೃಷ್ಟಿ! ಸಿದ್ದರಾಮಯ್ಯ ಘೋಷಣೆ

0
ಕೈಗಾರಿಕೋದ್ಯಮದಲ್ಲಿ 9,823.31 ಕೋಟಿ ರೂಪಾಯಿ ಹೂಡಿಕೆ; 5,605 ಉದ್ಯೋಗಗಳನ್ನು ಸೃಷ್ಟಿ! ಸಿದ್ದರಾಮಯ್ಯ ಘೋಷಣೆ

ಬೆಂಗಳೂರು, ಡಿಸೆಂಬರ್ 24: ರಾಜ್ಯ ಸರ್ಕಾರ ಒಟ್ಟು 9,823.31 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಒಂಬತ್ತು ಕೈಗಾರಿಕಾ ಯೋಜನೆಗಳಿಗೆ ಸೋಮವಾರ ಅನುಮೋದನೆ ನೀಡಿದ್ದು, ಇದು ಸರಿಸುಮಾರು 5,605 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಕ್ಲಿಯರೆನ್ಸ್ ಸಮಿತಿ(ಎಸ್‌ಎಚ್‌ಎಲ್‌ಸಿಸಿ)ಯ 64ನೇ ಸಭೆಯಲ್ಲಿ ಈ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಇವುಗಳಲ್ಲಿ ಮೂರು ಹೊಸ ಹೂಡಿಕೆ ಪ್ರಸ್ತಾಪಗಳಾಗಿದ್ದರೆ, ಉಳಿದ ಆರು ಅಸ್ತಿತ್ವದಲ್ಲಿರುವ ಯೋಜನೆಗಳ ವಿಸ್ತರಣೆ ಅಥವಾ ತಿದ್ದುಪಡಿಗಳನ್ನು ಒಳಗೊಂಡಿರುತ್ತವೆ.

ಅಧಿಕೃತ ಹೇಳಿಕೆಯ ಪ್ರಕಾರ, ಅನುಮೋದಿತ ಹೊಸ ಯೋಜನೆಗಳು ಡಿಎನ್ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಐಟಿಐಆರ್, ದೇವನಹಳ್ಳಿಯಲ್ಲಿ 998 ಕೋಟಿ ಹೂಡಿಕೆ ಮಾಡುತ್ತಿದ್ದು, 467 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆ ಇದೆ.

ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್​​​ನಲ್ಲಿ ಸೆಮಿಕಂಡಕ್ಟರ್ ವಲಯದಲ್ಲಿ 3,425 ಕೋಟಿ ವೆಚ್ಚದ ಪ್ರಥಮ ಯೋಜನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

LEAVE A REPLY

Please enter your comment!
Please enter your name here