Home ಸ್ಥಳೀಯ ಚಿಕ್ಕೋಡಿಯಲ್ಲಿ ದಲಿತರ ಗುಡಿಸಲುಗಳಿಗೆ ಬೆಂಕಿ! ಹಲವು ಕುಟುಂಬಗಳು ಬೀದಿಬದಿ; ಸವರ್ಣಿಯರೇ ಇಟ್ಟರೆ ಬೆಂಕಿ?

ಚಿಕ್ಕೋಡಿಯಲ್ಲಿ ದಲಿತರ ಗುಡಿಸಲುಗಳಿಗೆ ಬೆಂಕಿ! ಹಲವು ಕುಟುಂಬಗಳು ಬೀದಿಬದಿ; ಸವರ್ಣಿಯರೇ ಇಟ್ಟರೆ ಬೆಂಕಿ?

0
ಚಿಕ್ಕೋಡಿಯಲ್ಲಿ ದಲಿತರ ಗುಡಿಸಲುಗಳಿಗೆ ಬೆಂಕಿ! ಹಲವು ಕುಟುಂಬಗಳು ಬೀದಿಬದಿ; ಸವರ್ಣಿಯರೇ ಇಟ್ಟರೆ ಬೆಂಕಿ?

ಬೆಳಗಾವಿ, ಅಕ್ಟೋಬರ್ 28: ಚಿಕ್ಕೋಡಿಯಲ್ಲಿ ಸವರ್ಣೀಯರಿಂದ ದಲಿತರ ಗುಡಿಸಲುಗಳಿಗೆ ಬೆಂಕಿಸರ್ಕಾರಿ ಗೋಮಾಳ ಜಾಗಕ್ಕಾಗಿ ದಲಿತ ಹಾಗೂ ಸವರ್ಣಿಯ ಕುಟುಂಬಗಳ ಮಧ್ಯೆ ನಡೆದ ಗಲಾಟೆ ಬಳಿಕ, ನಿನ್ನೆ ತಡರಾತ್ರಿ ದಲಿತ ಕುಟುಂಬದ ಗುಡಿಸಲುಗಳಿಗೆ ಬೆಂಕಿ ಬಿದ್ದಿರುವ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ.

ಮುಗಳಖೋಡ ಗ್ರಾಮದ ಪ್ರಬಲ ಜಾತಿಯ ಜನರು ದಲಿತ ಕುಟುಂಬದ ಗುಡಿಸಲುಗಳಿಗೆ ಬೆಂಕಿ ಇಟ್ಟಿದ್ದಾರೆ ಎನ್ನಲಾಗಿದ್ದು ದಲಿತರಿಗೆ ಸೇರಿದ ಗುಡಿಸಲುಗಳು ಬೆಂಕಿಗೆ ಸುಟ್ಟು ಕರಕಲಾಗಿವೆ.

ಗ್ರಾಮದ ಗೋಮಾಳ‌ ಜಾಗಕ್ಕಾಗಿ ಎರಡು ಕುಟುಂಬಗಳ ಮಧ್ಯೆ ಹಿಂದಿನಿಂದ ಇದ್ದ ವೈಷಮ್ಯ ಈ ಜಗಳಕ್ಕೆ ಕಾರಣ ಎಂದು ತಿಳಿದುಂದಿದ್ದು, ಗೋಮಾಳ ಜಾಗದಲ್ಲಿ ಶೆಡ್ ಹಾಕಿಕೊಂಡಿದ್ದ ಮಹಾದೇವ ಮಾದರ ಎಂಬುವವರ ಕುಟುಂಬ ಸುಮಾರು 12 ಗುಂಟೆ ಗೋಮಾಳ ಜಾಗದಲ್ಲಿ ಗುಡಿಸಲುಗಳನ್ನು ನಿರ್ಮಾಣ ಮಾಡಿದ್ದರು. ಈ ಗುಡಿಸಲುಗಳಿಗೆ ಊರಿನ ಮಹಾವೀರ ಕುರಾಡೆ ಕುಟುಂಬದವರು ಬೆಂಕಿ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಬಹಳ ದಿನಗಳಿಂದಲೂ ಎರಡೂ ಕುಟುಂಬಗಳ ಮಧ್ಯೆ ಗಲಾಟೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ತಡರಾತ್ರಿ ಗುಡಿಸಲುಗಳಿಗೆ ಬೆಂಕಿ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದು, ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here