
ಎಂ.ಕೆ.ಹುಬ್ಬಳ್ಳಿ, ಅಕ್ಟೋಬರ್ 09: ದಾಸ್ತಿಕೊಪ್ಪ ಗ್ರಾಮದ ಹೊರವಲಯದ ರಾಣಿ ಶುಗರ್ ಕಾರ್ಖಾನೆ ಆವರಣದಲ್ಲಿರುವ ಬಂಡೆಮ್ಮ ದೇವಿಗೆ ಸುತ್ತಲಿನ ಗ್ರಾಮಗಳ ಮಹಿಳೆಯರು ನಿತ್ಯ ಬಂದು ದೇವಿ, ಬನ್ನಿಮರ ಪೂಜಿಸಿ ಪ್ರಾರ್ಥಿಸುತ್ತಿದ್ದಾರೆ.
ದಿನವೂ ಒಂದೊಂದು ಬಣ್ಣದ ಸೀರೆ ಧರಿಸಿ ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಕೈಗೊಂಡು ಒಳಿತಿಗಾಗಿ ಪ್ರಾರ್ಥಿಸುತ್ತಾರೆ. ನವರಾತ್ರಿಯ ಹಿನ್ನೆಲೆಯಲ್ಲಿ ದೇವಿಯ ಗುಡಿಗಳಿಗೆ, ಬನ್ನಿ ಮರಕ್ಕೆ ಮಹಿಳೆಯರು ವಿಶೇಷವಾಗಿ ಪೂಜೆ ಕೈಗೊಳ್ಳುತ್ತಾರೆ.
7ನೇ ದಿನವಾದ ಇಂದು ನೀಲಿ ಬಣ್ಣದ ಸೀರೆಗಳನ್ನು ತೊಟ್ಟು ಮಹಿಳೆಯರು ವಿಶೇಷವಾಗಿ ಕಂಗೊಳಿಸಿದರು