Home ಮನರಂಜನೆ ರೆಹಮಾನ್ ಸೈರಾ ದಾಂಪತ್ಯ ಅಂತ್ಯ! 29 ವರ್ಷಗಳ ಸಂಸಾರಕ್ಕೆ ವಿದಾಯ; ಸೈರಾ ವಿಚ್ಛೇಧನ ವಿಚಾರ ಖಚಿತ!

ರೆಹಮಾನ್ ಸೈರಾ ದಾಂಪತ್ಯ ಅಂತ್ಯ! 29 ವರ್ಷಗಳ ಸಂಸಾರಕ್ಕೆ ವಿದಾಯ; ಸೈರಾ ವಿಚ್ಛೇಧನ ವಿಚಾರ ಖಚಿತ!

0
ರೆಹಮಾನ್ ಸೈರಾ ದಾಂಪತ್ಯ ಅಂತ್ಯ! 29 ವರ್ಷಗಳ ಸಂಸಾರಕ್ಕೆ ವಿದಾಯ; ಸೈರಾ ವಿಚ್ಛೇಧನ ವಿಚಾರ ಖಚಿತ!

ಮುಂಬೈ, ನವೆಂಬರ್ 20: ಭಾರತೀಯ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಹೊಂದಿರುವ ಖ್ಯಾತ ಮ್ಯೂಸಿಕ್ ಡೈರೆಕ್ಟರ್​ ಹಾಗೂ ಸಿಂಗರ್ ಎ.ಆರ್​. ರೆಹಮಾನ್ ಅವರ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಪತ್ನಿ ಸೈರಾ ಭಾನು ಜೊತೆಗಿನ ದಾಂಪತ್ಯಕ್ಕೆ ಅವರು ಅಂತ್ಯ ಹಾಡಿದ್ದಾರೆ.

ಎ.ಆರ್​. ರೆಹಮಾನ್ ಹಾಗೂ ಸೈರಾ ಭಾನು ಅವರು 29 ವರ್ಷಗಳ ಕಾಲ ಸಂಸಾರ ನಡೆಸಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಮಧ್ಯೆ ವೈಮನಸ್ಸು ಮೂಡಿತ್ತು. ವಿಚ್ಛೇದನದ ವಿಚಾರವನ್ನು ಸೈರಾ ಭಾನು ಅವರು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.

1995ರಲ್ಲಿ ಎ.ಆರ್. ರೆಹಮಾನ್ ಮತ್ತು ಸೈರಾ ಬಾನು ಅವರು ವಿವಾಹ ಆಗಿದ್ದರು. ರೆಹಮಾನ್ ಮತ್ತು ಸೈರಾ ಬಾನು ಜೋಡಿಗೆ ಮೂವರು ಮಕ್ಕಳು ಇದ್ದಾರೆ.

LEAVE A REPLY

Please enter your comment!
Please enter your name here