
ಚನ್ನಮ್ಮನ ಕಿತ್ತೂರು, ಅಕ್ಟೋಬರ್ 25: ಸಮ ಸಮಾಜಕ್ಕಾಗಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ನಾಡಿನ ಹೋರಾಟಗಾರರು, ಸಂತರು, ಶರಣರು, ಜ್ಞಾನಿಗಳು ಕನಸು ಕಂಡಂತೆ ಇವತ್ತು ಸರ್ಕಾರ ಸಮಾಜಪರವಾದ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಜಾತಿ ವ್ಯವಸ್ಥೆ ಅಳಿಸಬೇಕು, ಮನುಷ್ಯತ್ವ ಉಸಿರಾಡಬೇಕು ಅಂತ ಬುದ್ಧ, ಬಸವ, ಅಂಬೇಡ್ಕರ್, ಹೋರಾಡಿದರು. ರಾಣಿ ಚನ್ನಮ್ಮ, ರಾಯಣ್ಣ ಸೇರಿದಂತೆ ಅನೇಕ ಮಹನೀಯರು ಸಮ ಸಮಾಜಕ್ಕಾಗಿ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ ಎಂದರು.