Home ರಾಷ್ಟೀಯ ಅನ್ನದಾತರಿಗೆ ಕೇಂದ್ರ ದೀಪಾವಳಿ ಗಿಫ್ಟ್! ಕ್ವಿಂಟಲ್ ಭತ್ತಕ್ಕೆ ₹2,300 ಬೆಂಬಲ ಬೆಲೆ!

ಅನ್ನದಾತರಿಗೆ ಕೇಂದ್ರ ದೀಪಾವಳಿ ಗಿಫ್ಟ್! ಕ್ವಿಂಟಲ್ ಭತ್ತಕ್ಕೆ ₹2,300 ಬೆಂಬಲ ಬೆಲೆ!

0
ಅನ್ನದಾತರಿಗೆ ಕೇಂದ್ರ ದೀಪಾವಳಿ ಗಿಫ್ಟ್! ಕ್ವಿಂಟಲ್ ಭತ್ತಕ್ಕೆ ₹2,300 ಬೆಂಬಲ ಬೆಲೆ!

ನವದೆಹಲಿ, ಅ. 27: ಕೇಂದ್ರ ಸರ್ಕಾರ ಅನ್ನದಾತರಿಗೆ ದೀಪಾವಳಿ ಹಬ್ಬಕ್ಕೆ ಬೆಂಬಲ ಬೆಲೆಯ ಗಿಫ್ಟ್ ನೀಡಿದೆ.

ಭತ್ತದ ಬೆಂಬಲ ಬೆಲೆ ಹೆಚ್ಚಿಸುವ ಮೂಲಕ ಭತ್ತ ಬೆಳೆಗಾರರ ಬದುಕಿಗೆ ಬೆಳಕು ಬೀರಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಸುದ್ದಿಗೋಷ್ಠಿಯಲ್ಲಿಂದು ಕೇಂದ್ರ ಸರ್ಕಾರ ಭತ್ತದ ಬೆಳೆಗಾರರ ಬೆಂಬಲಕ್ಕೆ ನಿಂತಿರುವ ಬಗ್ಗೆ ಅಗತ್ಯ ಮಾಹಿತಿ ನೀಡಿದರು.

2013-14 ರಲ್ಲಿ ಪ್ರತಿ ಕ್ವಿಂಟಲ್ ಭತ್ತಕ್ಕೆ ರೂ.1,310 ಇದ್ದು, ಈಗ ಅದನ್ನು 2,300 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದರು.ಕೇಂದ್ರ ಆಹಾರ ಇಲಾಖೆ ಮತ್ತು ಭಾರತೀಯ ಆಹಾರ ನಿಗಮವು ಪ್ರಸಕ್ತ ಮುಂಗಾರು ಹಂಗಾಮಿನ 185 ಲಕ್ಷ ಟನ್ ಭತ್ತ ಮತ್ತು 124 ಲಕ್ಷ ಟನ್ ಅಕ್ಕಿ ಸಂಗ್ರಹಕ್ಕೆ ಯೋಜನೆ ಹಾಕಿಕೊಂಡಿದೆ ಎಂದರು.

LEAVE A REPLY

Please enter your comment!
Please enter your name here