
ಕಿತ್ತೂರು ವಿಜಯೋತ್ಸವದ 200 ನೇ ವರ್ಷದ ಸಂಭ್ರಮಾಚರಣೆಯ ಸವಿನೆನಪಿಗಾಗಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಯ ವಿಜಯಪುರ ದಲ್ಲಿರುವ ಇತಿಹಾಸ ಅಧ್ಯಯನ ವಿಭಾಗವನ್ನು ಕಿತ್ತೂರಿಗೆ ಸ್ಥಳಾಂತರಿಸುವಂತೆ ಕಿತ್ತೂರಿನ ಕಲ್ಮಠದ ಶ್ರೀಗಳು ಹಾಗೂ ಸಮಸ್ತ ಕಿತ್ತೂರು ನಾಡಿನ ಪ್ರಜ್ಞಾವಂತ ನಾಗರಿಕರು ರಾಣಿ ಚನ್ನಮ್ಮ ವಿವಿ ಸಿಂಡಿಕೇಟ್ ಸದಸ್ಯರಾದ ಮಹಾಂತೇಶ ಕಂಬಾರ ಅವರ ಮೂಲಕ ರಾಣಿ ಚನ್ನಮ್ಮ ವಿವಿ ಕುಲಪತಿಗಳಿಗೆ ಮನವಿ ಮಾಡಿದ್ದಾರೆ.
ಕಿತ್ತೂರಿನ ಮೆರುಗು ಹೆಚ್ಚಿಸುವ ನಿಟ್ಟಿನಲ್ಲಿ ಈಗಾಗಲೇ ವಿಜಯಪುರದಲ್ಲಿರುವ ಇತಿಹಾಸ ಅಧ್ಯಯನ ವಿಭಾಗವನ್ನು ಕಿತ್ತೂರಿಗೆ ಸ್ಥಳಾಂತರ ಮಾಡುವಂತೆ ಮನವಿ ಮಾಡಿದ್ದಾರೆ.
ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ ಕಿತ್ತೂರು ತಾಲೂಕು ಅಧ್ಯಕ್ಷ ಶ್ರೀಕಾಂತ ದಳವಾಯಿ, ಜಿ.ಜಿ ಹೈಸ್ಕೂಲು ಉಪ ಪ್ರಾಂಶುಪಾಲ ಮಹೇಶ ಚನ್ನಂಗಿ ಹಾಗೂ ಇತರರು ಉಪಸ್ಥಿತರಿದ್ದರು.