
ಬೆಂಗಳೂರು, ನವೆಂಬರ್ 28: ಎಮ್.ಕೆ. ಹುಬ್ಬಳ್ಳಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಳೆದ 4ವರ್ಷಗಳಲ್ಲಿ 70 ಕೋಟಿಗೂ ಅಧಿಕ ಹಣ ಅಕ್ರಮಕೋರರ ಜೇಬು ಸೇರಿದೆ. ಈ ಭಾರೀ ಅವ್ಯವಹಾರ ಕುರಿತು ಉನ್ನತ ತನಿಖೆಯಾಗಬೇಕು, ಪ್ರಸ್ತುತ ಆಡಳಿತ ಮಂಡಳಿಯನ್ನು ‘ಸೂಪರ್ ಸೀಡ್’ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ನೀಡಿದೆ.
ಕಾರ್ಖಾನೆಯ ಆಡಳಿತ ಮಂಡಳಿ, ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಬ್ಬಂದಿ ಈ ಕೋಟ್ಯಂತರ ಅವ್ಯವಹಾರದಲ್ಲಿ ಪಾಲ್ಗೊಂಡಿದ್ದಾರೆ.ಆದ್ದರಿಂದ ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕಾರ್ಖಾನೆಯ 18ಸಾವಿರ ಷೇರುದಾರರಿಗೆ ನ್ಯಾಯ ಒದಗಿಸಬೇಕು ಎಂದು ಮಹಾಸಂಘದ ರಾಜ್ಯಾಧ್ಯಕ್ಷ ಬೀರಪ್ಪ ದೇಸನೂರ ಅವರು ಒತ್ತಾಯಿಸಿದರು.

ಈ ವೇಳೆಯಲ್ಲಿ ಒಕ್ಕೂಟದ ವರಿಷ್ಠರಾದ ಸಂಜೀವಕುಮಾರ ತಿಲಗರ, ಬಸವರಾಜ ಕೊಡ್ಲಿ, ಮಹಾಂತೇಶ್ ಗೌರಿ, ಸುರೇಶ್ ಮೂಲಿಮನಿ, ಮಹಾಂತೇಶ್ ಕಮತ್, ಬಸನಗೌಡ ಪಾಟೀಲ, ಗಣೇಶ ಇಳಿಗೇರ, ಮಹಾದೇವಿ ಅಣ್ಣಿಗೇರಿ, ಹೇಮಾ ಕಾಜಗಾರ, ಆನಂದ ಹುಚ್ಚಗೌಡರ, ಬಾಬು ಗರಗ, ಬಾಬು ಕುರುಬರ ಇತರರು ಉಪಸ್ಥಿತರಿದ್ದರು.