
ಬೆಂಗಳೂರು, ಮಾ.07 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿರುವ 16ನೇ ಬಜೆಟ್ ಭಾಷಣದ ಪುಟಗಳಲ್ಲಿ ಸಂದರ್ಭಕ್ಕನುಸಾರವಾಗಿ ಹಿರಿಯ ಕವಿಗಳು ಸೇರಿದಂತೆ ಬಸವಣ್ಣ ಮೊದಲಾದ ಶರಣರ ವಚನಗಳನ್ನು ಉಲ್ಲೇಖಿಸಿರುವುದು ವಿಶೇಷವಾಗಿತ್ತು.
ಅದರಲ್ಲೂ ಮಂಗಳೂರಿನ ಯುವ ಕವಿ ವಿಲ್ಸನ್ ಕಟೀಲ್ ಅವರ ಕವಿತೆಯ ಸಾಲು ಉಲ್ಲೇಖಿಸಿದ್ದು ಯುವ ಸಾಹಿತ್ಯಾಸಕ್ತರಿಗೆ ಸಂತಸವನ್ನುಂಟು ಮಾಡಿದೆ.
ಜುಲೈ ಸಂಪನ್ಮೂಲ ಇಲಾಖೆಯ ವಾರ್ಷಿಕ ಬಜೆಟ್ ಮಂಡನೆ ವೇಳೆ ಕವಿ ವಿಲ್ಸನ್ ಕಟೀಲ್ ಅವರ ಹಾ! ಗಂಟಲು ಒಣಗಿದೆ!!
ತಕೋ ಈ ಬಂಗಾರದ ಸರಪಳಿ
ಒಂದು ಗುಟುಕು ನೀರು ಕೊಡು.. ಅನ್ನೋ ಕವಿತೆಯ ಸಾಲನ್ನು ಆಯ್ಕೆ ಮಾಡಿ ಬಜೆಟ್ ಮಂಡಿಸುವ ವೇಳೆ ಈ ಸಾಲುಗಳನ್ನು ಉಲ್ಲೇಖಿಸಿದ್ದಾರೆ.
ಈ ಮೂಲಕ ಕವಿಯೊಬ್ಬನ ಸಾಲು ಸರ್ಕಾರದ ಗಮನ ಸೆಳೆದಿರುವುದು ಅಲ್ಲದೇ ಸರ್ಕಾರದ ಕಡತ ಸೇರಿದ್ದು ಸಾರ್ಥಕತೆ ತಂದಿದೆ ಅನ್ನೋ ಮಾತುಗಳು ಸಾಹಿತ್ಯಿಕ ವಲಯದಲ್ಲಿ ಕೇಳಿಬರುತ್ತಿದೆ.
ಸ್ವತಃ ವಿಲ್ಸನ್ ಅವರಿಗೂ ಈ ವಿಷಯ ಗೊತ್ತಿಲ್ಲದೇ ಸ್ನೇಹಿತರ ಮೂಲಕ ವಿಷಯ ತಿಳಿದು ಸಂತಸಪಟ್ಟಿದ್ದಾರೆ.