Home ಸ್ಥಳೀಯ ಕಣ್ಮರೆಯಾಗಿದ್ದ ಮಗ ಮರಳಿ ಮನೆಗೆ! ಛತ್ತೀಸಗಡದ ಬಾಲಕ ಖಾನಾಪುರದಲ್ಲಿ ಪತ್ತೆ ; ಪೋಷಕರ ಮಡಿಲು ಸೇರಿಸಿದ ಪೊಲೀಸರಿಗೆ ಮೆಚ್ಚುಗೆ!

ಕಣ್ಮರೆಯಾಗಿದ್ದ ಮಗ ಮರಳಿ ಮನೆಗೆ! ಛತ್ತೀಸಗಡದ ಬಾಲಕ ಖಾನಾಪುರದಲ್ಲಿ ಪತ್ತೆ ; ಪೋಷಕರ ಮಡಿಲು ಸೇರಿಸಿದ ಪೊಲೀಸರಿಗೆ ಮೆಚ್ಚುಗೆ!

0
ಕಣ್ಮರೆಯಾಗಿದ್ದ ಮಗ ಮರಳಿ ಮನೆಗೆ! ಛತ್ತೀಸಗಡದ ಬಾಲಕ ಖಾನಾಪುರದಲ್ಲಿ ಪತ್ತೆ ; ಪೋಷಕರ ಮಡಿಲು ಸೇರಿಸಿದ ಪೊಲೀಸರಿಗೆ ಮೆಚ್ಚುಗೆ!

ಖಾನಾಪುರ, ನವೆಂಬರ್ 25:ಅಚಾನಕ್ಕಾಗಿ ಹೆತ್ತವರಿಂದ ಕಣ್ಮರೆಯಾಗಿದ್ದ ಛತ್ತೀಸಗಡದ ಪಲಾರಿ ಜಿಲ್ಲೆ ದಾಮ್ಮಿ ಗ್ರಾಮದ 10ವರ್ಷದ ಬಾಲಕನನ್ನು ಖಾನಾಪುರ ಪೊಲೀಸರು ಮರಳಿ ಆತನ ಪೋಷಕರ ಮಡಿಲು ಸೇರಿಸಿದ್ದಾರೆ!

112 ಸಂಖ್ಯೆಗೆ ಕರೆ ಮಾಡಿದ ನಾಗರಿಕರೊಬ್ಬರು ಅಪರಿಚಿತ ಬಾಲಕನೊಬ್ಬ ಏಕಾಂಗಿಯಾಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿರುವ ಮಾಹಿತಿಯನ್ನು ಖಾನಾಪುರ ಪೊಲೀಸರಿಗೆ ನೀಡಿದ್ದರು.

ನಂತರ ಬಾಲಕನನ್ನು ವಶಕ್ಕೆ ಪಡೆದ ಪೊಲೀಸರು ಗೂಗಲ್ ಮ್ಯಾಪ್ ಮೂಲಕ ವಿವಿಧ ಊರುಗಳನ್ನು ತೋರಿಸಿದಾಗ ಬಾಲಕ ವಿಕ್ರಂ ದಾಮ್ಮಿ ನನ್ನೂರು ಎಂದು ಗುರುತಿಸಿದ್ದ. ತಕ್ಷಣ ಆತನ ತಂದೆಯ ಜೊತೆಗೆ ಸಂಪರ್ಕ ಸಾಧಿಸಿ ಬಾಲಕನನ್ನು ಒಪ್ಪಿಸಿದ್ದಾರೆ!

ಖಾನಾಪುರ ಠಾಣೆಯ ಪಿ.ಐ ಮಂಜುನಾಥ ನಾಯ್ಕ, ಎಸ್.ಐ ಗಿರೀಶ ಎಂ, ಸಿಬ್ಬಂದಿ ಜಗದೀಶ ಹುಬ್ಬಳ್ಳಿ, ಜಯರಾಮ ಹಮ್ಮಣ್ಣವರ, ಗುರುರಾಜ ತಮದಡ್ಡಿ, ಕುತುಬುದ್ದೀನ ಸನದಿ ಅವರ ಕಾರ್ಯಕ್ಕೆ ಪೋಷಕ ವರ್ಗ ಹರ್ಷ ಜೊತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ!

LEAVE A REPLY

Please enter your comment!
Please enter your name here