
ಚನ್ನಮ್ಮನ ಕಿತ್ತೂರು, ಅಕ್ಟೋಬರ್ 25: ಬ್ರಿಟಿಷರಿಗೆ ಮೊಟ್ಟ ಮೊದಲ ಬಾರಿಗೆ ಸೋಲಿನ ರುಚಿಯುಣಿಸಿದ ಕೀರ್ತಿ ಕಿತ್ತೂರಿಗೆ ಸಲ್ಲುತ್ತದೆ ಅಂತ ದಿಟ್ಟ ರಾಣಿ ಚನ್ನಮ್ಮಾಜಿ 1824 ರಿ ಮೊದಲ ಸ್ವಾತಂತ್ರ್ಯ ಸಂಗ್ರಾಮದ ವಿಜಯೋತ್ಸವದ ಪ್ರತೀಕವಾಗಿ ಈ ಉತ್ಸವವನ್ನು ಆಯೋಜಿಸುತ್ತ ಬರಲಾಗಿದೆ ಎಂದರು ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ್.
ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಶಾಸಕ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೋಟಿ ನಿರ್ಲಕ್ಷ್ಯತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ ಮಾನ್ಯ ಮುಖ್ಯಮಂತ್ರಿಗಳು 50 ಕೋಟಿ ಅನುದಾನ ಒದಗಿಸಿ ಕೋಟೆ ಅಭಿವೃದ್ಧಿಗೆ ಬದ್ದರಾಗಿರುವುದಾಗಿ ಪುನಶ್ಚೇತನ ಕಾರ್ಯಕ್ಕೆ ಪ್ರವಾಸೋದ್ಯಮ ಹಿನ್ನೆಲೆಯಲ್ಲಿ ಅಕರ್ಷಣೆಯ ಕಾರಣ ಇನ್ನೂ ಹಂತ ಹಂತವಾಗಿ ಕ್ಷೇತ್ರಾಭಿವೃದ್ದಿ ದೃಷ್ಟಿಯಿಂದ ಏತ ನೀರಾವರಿ ಯೋಜನೆಗೆ ಅನುದಾನ ನೀಡಿದ್ಜಾರೆ.
ಕೆರೆ ತುಂಬುವ ಕಾಮಗಾರಿ ಬಹುತೇಕ ಪೂರ್ಣಗೊಂಡಿವೆ ಇನ್ನೂ ಹೊಸ ಪ್ರಸ್ತಾವನೆ ಸಲ್ಲಿಸಲಾಗಿದೆ ಮಾನ್ಯರು ಅದಕ್ಕೆ ಸಮ್ಮತಿ ಸೂಚಿಸಿದ್ದಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ ಒಂದು ಶಾಲೆ ನಿರ್ಮಾಣಕ್ಕೆ ಅನುದಾನ ಒದಗಿಸಿದ್ಜಾರೆ ಲೋಕೋಪಯೋಗಿ ಇಲಾಖೆಯಿಂದಲೂ ಕೂಡ ಸಾಕಷ್ಟು ಅನುದಾನ ಒದಗಿಸಿದ್ಜಾರೆ.
ರೈತರ ಈ ಭಾಗದ ಜೀವನಾಡಿಯಾದ ಮಲಪ್ರಭಾ ಕಾರ್ಖಾನೆ ಪುನಶ್ಚೇತನಕ್ಕೆ ಸರ್ಕಾರ ಕೈ ಹಿಡಿದೆತ್ತುವ ಕೆಲಸ ಮಾಡಬೇಕಿದೆ ರೈತರ ಬಾಳು ಹಸನು ಮಾಡಬೇಕು ಅಂತ ಮನವಿ ಮಾಡಿದರು. ಈಗಾಗಲೇ ಥೀಮ್ ಪಾರ್ಕ್ ಸೇರಿದಂತೆ ಹಲವು ಕಾಮ ಗಾರಿಗೆ ಅನುದಾನ ನೀಡೀದ್ದಾರೆ ಇನ್ನೂ ಕೊಡ್ತೀನಿ ಅಂತ ಹೇಳಿದ್ದಾರೆ.