Home ಕರ್ನಾಟಕ ‘ಕೈ’ ಶಾಸಕ ‘ಸೈಲ್’ ಗೆ ಈಗ ‘ಜೈಲ್’ ಗತಿ! ಅದಿರು ನಾಪತ್ತೆ ಕೇಸ್ ನಲ್ಲಿ 7ವರ್ಷ ಸೆರೆವಾಸ; 40ಕೋಟಿ ದಂಡ!

‘ಕೈ’ ಶಾಸಕ ‘ಸೈಲ್’ ಗೆ ಈಗ ‘ಜೈಲ್’ ಗತಿ! ಅದಿರು ನಾಪತ್ತೆ ಕೇಸ್ ನಲ್ಲಿ 7ವರ್ಷ ಸೆರೆವಾಸ; 40ಕೋಟಿ ದಂಡ!

0
‘ಕೈ’ ಶಾಸಕ ‘ಸೈಲ್’ ಗೆ ಈಗ ‘ಜೈಲ್’ ಗತಿ! ಅದಿರು ನಾಪತ್ತೆ ಕೇಸ್ ನಲ್ಲಿ 7ವರ್ಷ ಸೆರೆವಾಸ; 40ಕೋಟಿ ದಂಡ!

ಬೆಂಗಳೂರು, ಅಕ್ಟೋಬರ್ 27: ಕಳೆದ 2009-10ರಲ್ಲಿ ದಾಖಲಾದ ಬೆಲೆಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣ ಸಂಬಂಧ ಆರೋಪಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ, 40ಕೋಟಿ ರೂಪಾಯಿ ದಂಡ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಶನಿವಾರ ಆದೇಶ ಪ್ರಕಟಿಸಿದೆ.

ಸತೀಶ್ ಸೈಲ್‌ ಜೊತೆಗೆ ಮಹೇಶ್ ಬಿಳಿಯೆ, ಲಕ್ಷ್ಮೀ ವೆಂಕಟೇಶ್ವರ ಮಿನರಲ್ಸ್, ಖಾರದಪುಡಿ ಮಹೇಶ್‌, ಮಲ್ಲಿಕಾರ್ಜುನ ಶಿಪ್ಪಿಂಗ್‌ ಕಂಪನಿಗೂ ಜೈಲು ಶಿಕ್ಷೆ ವಿಧಿಸಲಾಗಿದೆ. ಎಲ್ಲಾ ದೋಷಿತರ ವಿರುದ್ಧದ 6 ಪ್ರಕರಣಗಳ ಸಂಬಂಧ ಒಟ್ಟಾರೆ 40 ಕೋಟಿ ರೂ.ಗೂ (6 ಕೋಟಿ ರೂ., 9 ಕೋಟಿ ರೂ., 9 ಕೋಟಿ ರೂ., 9.52 ಕೋಟಿ ರೂ., 9.25 ಕೋಟಿ ರೂ. ಹಾಗೂ 90 ಲಕ್ಷ ರೂ.) ಅಧಿಕ ದಂಡವನ್ನು ಸಹ ನ್ಯಾಯಾಲಯ ವಿಧಿಸಿದೆ. ಜೊತೆಗೆ, ದಂಡದ ಹಣವನ್ನು ಜಪ್ತಿ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿದೆ.

ಅಪರಾಧಿಗಳಿಗೆ ವಂಚನೆ ಪ್ರಕರಣದಲ್ಲಿ 7 ವರ್ಷ, ಒಳಸಂಚು ಪ್ರಕರಣದಲ್ಲಿ 5 ವರ್ಷ ಮತ್ತು ಕಳ್ಳತನ ಪ್ರಕರಣದಲ್ಲಿ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈಗಾಗಲೇ ಜೈಲಿನಲ್ಲಿ ಕಳೆದಿರುವ ಶಿಕ್ಷೆ ಪ್ರಮಾಣವನ್ನು ಹೊರತುಪಡಿಸಿ, ಉಳಿದ ಶಿಕ್ಷೆಯನ್ನು ಆರೋಪಿಗಳು ಅನುಭವಿಸಬೇಕಿದೆ.

ಒಟ್ಟು 6 ಪ್ರಕರಣಗಳಲ್ಲಿ ಶಾಸಕ ಸತೀಶ್ ಸೈಲ್ ಹಾಗೂ ಅಂದಿನ ಬಂದರು ಅಧಿಕಾರಿಯಾಗಿದ್ದ ಮಹೇಶ್ ಬಿಳಿಯೆ ಸೇರಿದಂತೆ 7 ಜನರನ್ನು ದೋಷಿಗಳು ಎಂದು ಆದೇಶಿಸಿದ್ದ ನ್ಯಾಯಾಲಯ, ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಅಕ್ರಮ ಗಣಿಗಾರಿಕೆ ತನಿಖೆ ವೇಳೆ ಈ ಪ್ರಕರಣವನ್ನು ಬೆಳಕಿಗೆ ತಂದಿದ್ದ ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಸಮಗ್ರ ತನಿಖೆ ನಡೆಸಿ, ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು


            

LEAVE A REPLY

Please enter your comment!
Please enter your name here