
ಗೋಕಾಕ, ಅಕ್ಟೋಬರ್ 11: ಬಡವರ ವರವಾಗಿ ಪರಿಣಮಿಸಿರುವ ‘ಗೃಹಲಕ್ಷಿ’ ಯೋಜನೆಯ ಹಣ ಮನೆಯ ದಿನಸಿ, ಹಬ್ಬಗಳಲ್ಲಿ ಬಟ್ಟೆ, ಮದುವೆಗಳಲ್ಲಿ ಮುಯ್ಯಿ ಮಕ್ಕಳು, ಮೊಮ್ಮಕ್ಕಳಿಗೆ ಶಾಲಾ ಪರಿಕರಗಳ ಖರೀದಿ, ಹೀಗೆ ಹಲವಾರು ಬಗೆಗಳಲ್ಲಿ 2000ರೂಪಾಯಿ ಅನುಕೂಲವಾಗುತ್ತಿದೆ.
ಗೃಹಲಕ್ಷ್ಮೀ ಹಣದಲ್ಲಿ ಮಗನಿಗೆ ಬೈಕ್ ಖರೀದಿಸಿ ತಂದ ತಾಯಿ ಬಾಗವ್ವ.
ಆದರೆ ತಾಲೂಕಿನ ಕೌಜಲಗಿ ಗ್ರಾಮದ ಬಾಗವ್ವಾ ಸಣ್ಣಕ್ಕಿ ಎಂಬ ಮಹಿಳೆ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಮಗನ ಕನಸು ನನಸು ಮಾಡಿದ್ದಾರೆ!
‘ಗೃಹಲಕ್ಷ್ಮಿ’ ಯೋಜನೆಯ ಪ್ರತಿ ತಿಂಗಳ ಹಣ ಕೂಡಿಟ್ಟು, ತನ್ನ ಮಗ ರಮೇಶನಿಗಾಗಿ ದ್ವಿಚಕ್ರ ವಾಹನ ಖರೀದಿಸಿದ್ದಾರೆ.
ಈ ವಿಚಾರ ಗೊತ್ತಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು, ಬಾಗವ್ವ ಶುಕ್ರವಾರ ಬೈಕ್ ಖರೀದಿಸಲು ಮುಂಗಡ ಹಣ ನೀಡಿದ್ದಾರೆ. ‘ಗೃಹಲಕ್ಷಿ’ ಯೋಜನೆಯ ಹಣ ಇಂದು ಲಕ್ಷಾಂತರ ಮಹಿಳೆಯರ ಜೀವನದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಬದುಕು ಕಟ್ಟಿಕೊಳ್ಳಲು ನೆರವಾಗಿದೆ ಎಂದಿದ್ದಾರೆ.
ಮಹಾನವಮಿ ಹಬ್ಬದಂದು ದ್ವಿಚಕ್ರ ವಾಹನ ಕೊಳ್ಳಲು ಮುಂದಾಗಿರುವ ಮಗನಿಗೆ ತಾಯಿ ಗೃಹಲಕ್ಷ್ಮೀ ಹಣ ನೀಡಿರುವ ವಿಷಯ ಕೇಳಿ ಖುಷಿಯಾಗಿದೆ. ತಾಯಿ, ಮಗನಿಗೆ ಮನಃಪೂರ್ವಕವಾಗಿ ಶುಭ ಕೋರುತ್ತೇನೆ ಎಂದಿದ್ದಾರೆ.