Home ಸ್ಥಳೀಯ ದೇಶನೂರಿನ ಯೋಧ ರಾಜು ಕಡಕೋಳ ಅಮರ

ದೇಶನೂರಿನ ಯೋಧ ರಾಜು ಕಡಕೋಳ ಅಮರ

0
ದೇಶನೂರಿನ ಯೋಧ ರಾಜು ಕಡಕೋಳ  ಅಮರ

ನೇಸರಗಿ. ಸಮೀಪದ ದೇಶನೂರ ಗ್ರಾಮದ ವೀರಯೋಧ ಹವಾಲ್ದಾರ ರಾಜು ಮಹಾದೇವ. ಕಡಕೋಳ (38) ಎಂಬ ವೀರಯೋಧ ಬೆಳಗಾವಿಯಲ್ಲಿ ಅರ್ಮಿ ಸೇವೆ ಸಲ್ಲಿಸುತ್ತಿರುವಾಗ ಸೋಮವಾರದಂದು ರಾತ್ರಿ ಹೃದಯಘಾತದಿಂದ ಮೃತಪಟ್ಟು ವೀರಮರಣ ಹೊಂದಿರುವ ಘಟನೆ ನಡೆದಿದೆ.

ಕಳೆದ 15 ವರ್ಷಗಳಿಂದ 115 ನೇ ಮರಾಠ ಏನಪೆಂಟ್ರಿ ಬಟಾಲಿಯನಲ್ಲಿ ಸೇವೆ ಸಲ್ಲಿಸಿದ್ದಾರೆ. ವೀರಯೋಧನ ಮೃತದೇಹವು ಮಂಗಳವಾರ ಮದ್ಯಾಹ್ನ 4-00 ಘಂಟೆಗೆ ಬಂದಾಗ ಕುಟುಂಬಸ್ಥರ, ದೇಶನೂರ ಗ್ರಾಮಸ್ಥರ ದುಃಖದಲ್ಲಿ ಮುಳಗಿತ್ತು.

ಹನುಮಾನ ನಗರದಿಂದ ಆರಂಭವಾದ ವೀರಯೋಧನ ಮೃತದೇಹದ ಮೆರವಣಿಗೆ ಅಮರ ರಹೇ ರಾಜು ಕಡಕೋಳ ಅಮರ ರಹೇ ಎಂಬ ಘೋಷನೆಯೊಂದಿಗೆ ಕರ್ನಲ್ ವಿಕ್ರಂ ಶೆಂಗಾ ಸಂತಲಾ ನೇತೃತ್ವದಲ್ಲಿ ಮಿಲಿಟರಿ ಅಧಿಕಾರಿಗಳು, ಜವಾನ ಯೋಧರ ಪರೆಡ ಮೂಲಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ನಾನಾಸಾಹೇಬ ಪಾಟೀಲ, ದೇಶನೂರ, ಮೋಹರೆ, ನೇಸರಗಿ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಸದಸ್ಯರು, ನಿವೃತ್ತ ಸೈನಿಕರು, ಕಾರ್ಯನಿರತ ಸೈನಿಕರು, ಮೃತ ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.ಮೃತರು ಪತ್ನಿ, ಸಹೋದರ, ಸಹೋದರಿಯರು ಅಪಾರ ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here