Home ಕರ್ನಾಟಕ ನಿಲ್ಲದ ‘ಮಹಾ’ಪುಂಡಾಟಿಕೆ: ಶಿವಸೇನೆಯಿಂದ KSRTC ಬಸ್ ಗಳಿಗೆ ಮಸಿ

ನಿಲ್ಲದ ‘ಮಹಾ’ಪುಂಡಾಟಿಕೆ: ಶಿವಸೇನೆಯಿಂದ KSRTC ಬಸ್ ಗಳಿಗೆ ಮಸಿ

0
ನಿಲ್ಲದ ‘ಮಹಾ’ಪುಂಡಾಟಿಕೆ: ಶಿವಸೇನೆಯಿಂದ KSRTC ಬಸ್ ಗಳಿಗೆ ಮಸಿ

ಬೆಳಗಾವಿ, ಫೆಬ್ರುವರಿ25 ಯಲ್ಲಿ ಬಸ್ ಪ್ರಯಾಣಿಕರೊಬ್ಬರಿಗೆ ಕನ್ನಡ ಮಾತನಾಡು ಎಂದು ಹೇಳಿದ್ದಕ್ಕೆ ಕೆಎಸ್ ಆರ್ ಟಿಸಿ ನಿರ್ವಾಹಕನ ಮೇಲೆ ನಡೆದ ಹಲ್ಲೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಭಾಷಾ ವೈಷಮ್ಯಕ್ಕೆ ದಾರಿ ಮಾಡಿಕೊಟ್ಟಿದೆ.

ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸಂಚರಿಸುವ ಬಸ್ ಗಳನ್ನು ಅಲ್ಲಿನ ಮರಾಠಿ ಪುಂಡರು ಗುರಿಯಾಗಿಸಿಕೊಂಡಿದ್ದಾರೆ. ಉದ್ಧವ್ ಠಾಕ್ರೆ ಬಣದ ಶಿವಸೇನೆ ಪುಂಡರು ಮಹಾರಾಷ್ಟ್ರದಲ್ಲಿ ಕರ್ನಾಟಕ ಸಾರಿಗೆ ಬಸ್ ಗಳಿಗೆ ಮಸಿ ಬಳಿದಿದ್ದಾರೆ. ಸೋಲಾಪುರ ಪಟ್ಟಣದಲ್ಲಿ ಬಸ್ ವಿಂಡ್ ಸ್ಕ್ರೀನ್ ಮೇಲೆ ‘ಜೈ ಮಹಾರಾಷ್ಟ್ರ’ ಎಂದು ಬಣ್ಣ ಬಳಿದು, ಚಾಲಕನ ತಲೆ ಮತ್ತು ಮುಖದ ಮೇಲೆ ಕೇಸರಿ ಪುಡಿಯನ್ನು ಬಳಿದಿದ್ದಾರೆ.

ಬಸ್ ಚಾಲಕನನ್ನು ‘ಜೈ ಮಹಾರಾಷ್ಟ್ರ’ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದ್ದಾರೆ. ಪುಣೆಯ ಸ್ವಾರಗೇಟ್ ಬಳಿ ಸಹ ನಡು ರಸ್ತೆಯಲ್ಲಿಯೇ ಬಲವಂತವಾಗಿ ಬಸ್ ನಿಲ್ಲಿಸಿ ಕನ್ನಡ ಅಕ್ಷರಗಳಿಗೆ ಮಸಿ ಬಳಿದಿದ್ದಾರೆ. ಇನ್ನು ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ದಾಳಿ ನಡೆಸಿದ ಘಟನೆಗಳ ಕುರಿತು ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಈ ಕುರಿತು ಮಹಾರಾಷ್ಟ್ರದ ತಮ್ಮ ಸಹೋದ್ಯೋಗಿಯೊಂದಿಗೆ ಮಾತನಾಡಲು ಸಾರಿಗೆ ಇಲಾಖೆ ಕಾರ್ಯದರ್ಶಿಗೆ ಸೂಚಿಸಿರುವುದಾಗಿ ಹೇಳಿದ್ದಾರೆ.

ಕರ್ನಾಟಕದಲ್ಲಿ ವಾಸಿಸುವವರು ಕನ್ನಡ ಕಲಿಯಬೇಕು. ಇಂತಹ ಘಟನೆಗಳನ್ನು ಎಲ್ಲ ಪಕ್ಷಗಳು ಖಂಡಿಸಬೇಕು’ ಎಂದು ರೆಡ್ಡಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here