ಸುವರ್ಣ ಸಮಾಚಾರ ನ್ಯೂಸ್

ಚನ್ನಮ್ಮನ ಕಿತ್ತೂರು: “ಸಮಾಜ ಉಳಿಯಬೇಕು, ಸಮಾಜ ಬೆಳೆಯಬೇಕು” ಎನ್ನುವ ಆಶಯದೊಂದಿಗೆ ಪಂಚಮಸಾಲಿ ಸಮಾಜದ ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ಶಾಲೆಯ ನಿರ್ಮಾಣ ಮಾಡಲು ಉಚಿತವಾಅಗಿ ಎರಡು ಎಕರೆ ಜಮೀನನ್ನು ಉಡುಗೊರೆಯಾಗಿ ನೀಡಿಬೇಕು ಎಂದು ಪಂಚಮಸಾಲಿ ಸಮಾಜದ ಮುಖಂಡರಿಂದ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಅವರಿಗೆ ಮನವಿ ಸಲ್ಲಿಸಲಾಗಿದೆ.
ಕಿತ್ತೂರು ಲಿಂಗಾಯತ ಪಂಚಮಸಾಲಿ ಸಮಾಜದ ಭಾಂದವರು, ರೈತಾಪಿ ವರ್ಗಕ್ಕೆ ಸೇರಿದವರಾಗಿದ್ದು, ನಮ್ಮ ಸಮಾಜದ ಸಾಕಷ್ಟು ಜನರು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವುದನ್ನು ಗಮನದಲ್ಲಿಟ್ಟುಕೊಂಡು,
ಆರ್ಥಿಕವಾಗಿ ಕಡು ಬಡತನದಲ್ಲಿರುವ ಸಮಾಜದ ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ಶಾಲೆಯ ನಿರ್ಮಾಣ ಮತ್ತು ಸಮಾಜದ ಒಗ್ಗಟ್ಟಿಗೆ ಒಂದು ಸಭಾಂಗಣ ಕಟ್ಟುವ ಯೋಜನೆ ಮಾಡಲಾಗಿದ್ದು ಈ ಮಹತ್ವದ ಕಾರ್ಯಕ್ಕಾಗಿ ಅಗತ್ಯವಿರುವ ಜಾಗದ ಕೊರತೆ ಎದುರಾಗಿರುವುದರಿಂದ, ಶ್ರೀ ಕಲ್ಮಠದಿಂದ ಎರಡು ಎಕರೆ ಜಮೀನನ್ನು ಉಡುಗೊರೆಯಾಗಿ ನೀಡಿಬೇಕು ಎಂದು ಸಮಸ್ತ ಪಂಚಮಸಾಲಿ ಸಮಾಜದವರು ಮನವಿ ಸಲ್ಲಿಸಿದ್ದಾರೆ.
ಈ ವೇಳೆ ತಾಲೂಕಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಡಿ.ಆರ್. ಪಾಟೀಲ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಮಾಹಂತೇಶ ಗಿರಿನಟ್ಟಿ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಪ್ರವೀಣ ಸರದಾರ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಸತೀಶ ಲಗೋಂಟಿ, ಪಟ್ಟಣ ಪಂಚಾಯತ ಸದಸ್ಯ ಪ್ರಮೋದ ಕಾಜಗಾರ, ಪಂಚಮಸಾಲಿ ಸಮಾಜದ ಮುಖಂಡರಾದ ಬಸವರಾಜ ಸರದಾರ, ಈರಣ್ಣ ಕಡೆಮನಿ, ಚೇತನ ಸರಪಳಿ, ಸುರೇಶ ಕಡೆಮನಿ, ರಾಜು ಚಿಕ್ಕನಗೌಡರ, ಬಸನಗೌಡ ಪಾಟೀಲ, ರೂಪೇಶ ಅಳ್ನಾವರ ಸೇರಿದಂತೆ ವಿವಿಧ ಸಮಿತಿ ಸದಸ್ಯರು ಇದ್ದರುಸುವರ್ಣ ಸಮಾಚಾರ ನ್ಯೂಸ್
ಚನ್ನಮ್ಮನ ಕಿತ್ತೂರು: “ಸಮಾಜ ಉಳಿಯಬೇಕು, ಸಮಾಜ ಬೆಳೆಯಬೇಕು” ಎನ್ನುವ ಆಶಯದೊಂದಿಗೆ ಪಂಚಮಸಾಲಿ ಸಮಾಜದ ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ಶಾಲೆಯ ನಿರ್ಮಾಣ ಮಾಡಲು ಉಚಿತವಾಅಗಿ ಎರಡು ಎಕರೆ ಜಮೀನನ್ನು ಉಡುಗೊರೆಯಾಗಿ ನೀಡಿಬೇಕು ಎಂದು ಪಂಚಮಸಾಲಿ ಸಮಾಜದ ಮುಖಂಡರಿಂದ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಅವರಿಗೆ ಮನವಿ ಸಲ್ಲಿಸಲಾಗಿದೆ.
ಕಿತ್ತೂರು ಲಿಂಗಾಯತ ಪಂಚಮಸಾಲಿ ಸಮಾಜದ ಭಾಂದವರು, ರೈತಾಪಿ ವರ್ಗಕ್ಕೆ ಸೇರಿದವರಾಗಿದ್ದು, ನಮ್ಮ ಸಮಾಜದ ಸಾಕಷ್ಟು ಜನರು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವುದನ್ನು ಗಮನದಲ್ಲಿಟ್ಟುಕೊಂಡು,
ಆರ್ಥಿಕವಾಗಿ ಕಡು ಬಡತನದಲ್ಲಿರುವ ಸಮಾಜದ ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ಶಾಲೆಯ ನಿರ್ಮಾಣ ಮತ್ತು ಸಮಾಜದ ಒಗ್ಗಟ್ಟಿಗೆ ಒಂದು ಸಭಾಂಗಣ ಕಟ್ಟುವ ಯೋಜನೆ ಮಾಡಲಾಗಿದ್ದು ಈ ಮಹತ್ವದ ಕಾರ್ಯಕ್ಕಾಗಿ ಅಗತ್ಯವಿರುವ ಜಾಗದ ಕೊರತೆ ಎದುರಾಗಿರುವುದರಿಂದ, ಶ್ರೀ ಕಲ್ಮಠದಿಂದ ಎರಡು ಎಕರೆ ಜಮೀನನ್ನು ಉಡುಗೊರೆಯಾಗಿ ನೀಡಿಬೇಕು ಎಂದು ಸಮಸ್ತ ಪಂಚಮಸಾಲಿ ಸಮಾಜದವರು ಮನವಿ ಸಲ್ಲಿಸಿದ್ದಾರೆ.
ಈ ವೇಳೆ ತಾಲೂಕಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಡಿ.ಆರ್. ಪಾಟೀಲ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಮಾಹಂತೇಶ ಗಿರಿನಟ್ಟಿ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಪ್ರವೀಣ ಸರದಾರ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಸತೀಶ ಲಗೋಂಟಿ, ಪಟ್ಟಣ ಪಂಚಾಯತ ಸದಸ್ಯ ಪ್ರಮೋದ ಕಾಜಗಾರ, ಪಂಚಮಸಾಲಿ ಸಮಾಜದ ಮುಖಂಡರಾದ ಬಸವರಾಜ ಸರದಾರ, ಈರಣ್ಣ ಕಡೆಮನಿ, ಚೇತನ ಸರಪಳಿ, ಸುರೇಶ ಕಡೆಮನಿ, ರಾಜು ಚಿಕ್ಕನಗೌಡರ, ಬಸನಗೌಡ ಪಾಟೀಲ, ರೂಪೇಶ ಅಳ್ನಾವರ ಸೇರಿದಂತೆ ವಿವಿಧ ಸಮಿತಿ ಸದಸ್ಯರು ಇದ್ದರು