Home ಕರ್ನಾಟಕ ಪರಿಸರಕ್ಕೆ’TOXIC’ಆದ ಯಶ್ ಸಿನಿಮಾ! ಮರಗಳ ಮಾರಣಹೋಮ; ಕ್ರಮಕ್ಕೆ ಮುಂದಾದ ಸಚಿವ ಖಂಡ್ರೆ!

ಪರಿಸರಕ್ಕೆ’TOXIC’ಆದ ಯಶ್ ಸಿನಿಮಾ! ಮರಗಳ ಮಾರಣಹೋಮ; ಕ್ರಮಕ್ಕೆ ಮುಂದಾದ ಸಚಿವ ಖಂಡ್ರೆ!

0
ಪರಿಸರಕ್ಕೆ’TOXIC’ಆದ ಯಶ್ ಸಿನಿಮಾ! ಮರಗಳ ಮಾರಣಹೋಮ; ಕ್ರಮಕ್ಕೆ ಮುಂದಾದ ಸಚಿವ ಖಂಡ್ರೆ!

ಬೆಂಗಳೂರು, ಅಕ್ಟೋಬರ್. 30: ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಟಾಕ್ಸಿಕ್ ಸಿನಿಮಾ (Toxic Cinema) ತಂಡದ ವಿರುದ್ಧ ಅರಣ್ಯ ಸಚಿವ ಈಶ್ವರ್ ಖಂಡ್ರೆ (eshwar khandre) ಗರಂ ಆಗಿದ್ದಾರೆ.

ಬೆಂಗಳೂರಿನ ಎಚ್‌ಎಂಟಿ ವಶದಲ್ಲಿರುವ ಅರಣ್ಯ ಭೂಮಿಯನ್ನು ಶೂಟಿಂಗ್‌ಗೆ ಬಳಸಿಕೊಂಡಿದ್ದ ಟಾಕ್ಸಿಕ್ ಚಿತ್ರತಂಡ, ಅರಣ್ಯವನ್ನು ಹಾಳು ಮಾಡಿದೆ ಅಂತ ಈಶ್ವರ್ ಖಂಡ್ರೆ ಗಂಭೀರ ಆರೋಪ ಮಾಡಿದ್ದಾರೆ. ಅರಣ್ಯ ಪ್ರದೇಶದಲ್ಲಿ (Forest Area) ಗಿಡಮರ ಕಡಿದು ಬೃಹತ್ ಸೆಟ್ ಹಾಕಿರುವ ಆರೋಪ ಕೇಳಿ ಬಂದಿದೆ.

20 ಎಕರೆ ಹೆಚ್ ಎಂಟಿ ಅರಣ್ಯ ಪ್ರದೇಶದಲ್ಲಿ ಜಾಗದಲ್ಲಿ ಸಿನಿಮಾ ಸೆಟ್ ಹಾಕಲಾಗಿದ್ದು, ಕಳೆದ ಎರಡು ತಿಂಗಳಿನಿಂದ ಸಿನಿಮಾ ಶೂಟಿಂಗ್ ಆಗುತ್ತಿದೆ. ಹಾಗಾದ್ರೆ ಟಾಕ್ಸಿಕ್ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಾರಾರು? ಹೆಚ್ ಎಂಟಿ ಅನುಮತಿ ನೀಡಿದೆಯೋ?ಚಿತ್ರೀಕರಣಕ್ಕೂ ಮುನ್ನ ಗಿಡ ಮರ ಕಡಿದು ಸೆಟ್ ನಿರ್ಮಾಣಕ್ಕೆ ಅನುಕೂಲ ಮಾಡಿಕೊಟ್ಟಿದ್ದೆಯೇ? ಅರಣ್ಯ ಜಾಗದಲ್ಲಿ ಸಿನಿಮಾ ಸೆಟ್ ಅನುಮತಿ ನೀಡಿದವರಾರು? ಈ ಎಲ್ಲದರ ವಿರುದ್ಧ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

LEAVE A REPLY

Please enter your comment!
Please enter your name here