
ಬೆಂಗಳೂರು : ಇಷ್ಟು ದಿನ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಜನರು ಹಣ ನೀಡಿ ಟಿಕೆಟ್ ಪಡೆಯುತ್ತಿದ್ದರು. ಆದರೆ ಇದೀಗ ಪ್ರಯಾಣಿಕರ ಬೇಡಿಕೆಯಂತೆ ಟಿಕೆಟ್ ಪಡೆದುಕೊಳ್ಳುವ ಅವಕಾಶವನ್ನು ಕಲ್ಪಿಸಿದೆ.
ಹೌದು, ಪ್ರಯಾಣಿಕರ ಬಹುದಿನಗಳ ಬೇಡಿಕೆಯಂತೆ ಇದೀಗ KSRTC ಸಂಸ್ಥೆಯು ಒಂದು ಹೆಜ್ಜೆ ಮುಂದೆ ಹೋಗಿ, ದುಡ್ಡು ಕೊಟ್ಟು ಚಿಲ್ಲರೆ ವಿಚಾರವಾಗಿ ಕಂಡಕ್ಟರ್ ಜೊತೆಗೆ ಸಣ್ಣಪುಟ್ಟ ಕಿರಿಕ್ ಆಗುತ್ತಿದ್ದವು. ಆದರೆ ಇದೀಗ ಡೈನಮಿಕ್ ಕ್ಯೂಆರ್ ಕೋಡ್ ಮೂಲಕ ಹಣ ಪಾವತಿ ಮಾಡಬಹುದಾಗಿದೆ.
ರಾಜ್ಯದ 8800 ಬಸ್ ಗಳಲ್ಲಿ ಯುಪಿಐ ಮೂಲಕ ಹಣ ಪಾವತಿಸಬಹುದಾಗಿದೆ.ಆನ್ ಲೈನ್ ಹಣ ಸಂದಾಯ ಮಾಡುವ ಆಪ್ ಗಳಾದ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಹಾಗೂ ಭೀಮ್ ಆಪ್ ಮೂಲಕ ಹಣ ಪಾವತಿಸಬಹುದಾಗಿದೆ.
ಮುಂದಿನ ದಿನಗಳಲ್ಲಿ ಎಟಿಎಂ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಗಳಲ್ಲೂ ಹಣ ಸ್ವೀಕರಿಸಲಾಗುತ್ತದೆ ಎಂದು ಕರ್ನಾಟಕ ರಸ್ತೆ ಸಾರಿಗೆ ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.