ಚ.ಕಿತ್ತೂರು: ನವಂಬರ್ 14: ಸಮೀಪದ ಬೈಲೂರು ನಿಷ್ಕಲ ಮಂಟಪದ ಶ್ರೀ ಚನ್ನಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಂದ 12 ನೇ ಶತಮಾನದ ಶರಣ ಪರಂಪರೆಯ ಮಾದರಿ ಅಣುಕು ವಸ್ತ್ರ ವಿನ್ಯಾಸದ ಮೂಲಕ ಇಡೀ ಶಾಲೆ ಕಂಗೊಳಿಸಿತು.
ಬಸವಣ್ಣ, ಅಕ್ಕಮಹಾದೇವಿ ಮೊದಲಾದ ಶರಣರ ವೇಷ ಧರಿಸಿ ವಚನಾನುವಾದ ಮಾಡುವ ಮೂಲಕ ಮಕ್ಕಳ ದಿನಾಚರಣೆ ಯನ್ನು ವೈವಿಧ್ಯಮಯ ರೀತಿಯಲ್ಲಿ ಆಚರಿಸಿರುವುದು ತಾಲೂಕಿನ ಕಾಲೇಜುಗಳಿಗೆ ಮಾದರಿಯಾಗಿದೆ.
ಈ ವೇಳೆ ಶ್ರೀಮಠದ ಭಕ್ತವೃಂದ, ಗ್ರಾಮಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


