Home ಶಿಕ್ಷಣ ಭಾಷಾ ಶಿಕ್ಷಕರ ಆಪ್ತಸಮಾಲೋಚನಾ ಸಭೆ: ಸಮಗ್ರ ಚರ್ಚೆ ಹಾಗೂ ಮಾರ್ಗದರ್ಶನ

ಭಾಷಾ ಶಿಕ್ಷಕರ ಆಪ್ತಸಮಾಲೋಚನಾ ಸಭೆ: ಸಮಗ್ರ ಚರ್ಚೆ ಹಾಗೂ ಮಾರ್ಗದರ್ಶನ

0
ಭಾಷಾ ಶಿಕ್ಷಕರ ಆಪ್ತಸಮಾಲೋಚನಾ ಸಭೆ: ಸಮಗ್ರ ಚರ್ಚೆ ಹಾಗೂ ಮಾರ್ಗದರ್ಶನ

ಎಮ್.ಕೆ. ಹುಬ್ಬಳ್ಳಿ: ಮಲಪ್ರಭಾ ನದಿ ತಟದ ಪ್ರಶಾಂತ ವಾತಾವರಣದಲ್ಲಿ, ಗಂಗಾಬಿಕಾ ಐಕ್ಯಸ್ಥಳ ಮತ್ತು ಅಶ್ವಥನಾರಾಯಣ ಮಂದಿರದಲ್ಲಿ, ಇಂದಿನ ಎಮ್.ಕೆ. ಹುಬ್ಬಳ್ಳಿ ಮತ್ತು ಹೊಸಕಾದರವಳ್ಳಿ ಪ್ರಾಥಮಿಕಶಾಲಾ ಭಾಷಾ ಶಿಕ್ಷಕರ ಆಪ್ತಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಯಿತು.

ಪ್ರಾರಂಭಿಕ ಚಟುವಟಿಕೆಗಳು:ಸಭೆಯ ಪ್ರಾರ್ಥನೆ ಅವಧಿಯ ಚಟುವಟಿಕೆಗಳ ಕುರಿತು ಪ್ರೌಢ ವಿಭಾಗದ BRP ಕಡಕೋಳ ಸರ್‌ ಅವರು ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.

ಪ್ರಾರ್ಥನೆಯ ಮಹತ್ವವನ್ನು ವಿವರಿಸುತ್ತಾ, ವಿದ್ಯಾರ್ಥಿಗಳಲ್ಲಿ ಸದ್ಗುಣಗಳು ಬೆಳೆಸುವ ಚಟುವಟಿಕೆಗಳ ಬಗ್ಗೆ ವಿವರಿಸಿದರು ಸ್ಥಳದ ಐತಿಹಾಸಿಕ ಹಿನ್ನಲೆಯನ್ನು ಸಿದ್ದಯ್ಯ ಹಿರೇಮಠರು ತಿಳಿಸಿದರು.

ವಚನಗಳ ಚಿಂತನ: ಅಜೀತ ಹಂಜಿಯವರು ವಚನಗಳು ಹಾಗೂ ಶರಣ ಚಳುವಳಿಯಹಾಗೂ ಶರಣರ ಸಂದೇಶಗಳನ್ನು ಇಂದು ಮಕ್ಕಳ ಜೀವನದಲ್ಲಿ ಹೇಗೆ ಅಳವಡಿಸಬಹುದು ಎಂಬ ವಿಚಾರಗಳನ್ನು ಚರ್ಚಿಸಿದರು.

ಭಾಷಾ ಕೌಶಲ್ಯ ಅಭಿವೃದ್ದಿ: ಇಂಗ್ಲೀಷ್ ಭಾಷೆಯ ಆಟಗಳು ಮತ್ತು ಚಟುವಟಿಕೆಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ವಿದ್ಯಾ ಅವರು ವಿಶಿಷ್ಟ ವಿಷಯ ಮಂಡನೆ ಮಾಡಿದರು.ಆಟಗಳ ಮೂಲಕ ಭಾಷಾ ಕಲಿಕೆಯನ್ನು ಸುಲಭಗೊಳಿಸಲು ಬಳಸಬಹುದಾದ ತಂತ್ರಗಳನ್ನು ಅವಲೋಕಿಸಿದರು.

ಎಮ್.ಎಸ್. ಕಲ್ಮಠ, ಸಿ.ಆರ್. ಪಿ ಗಳಾದ ವಿನಾಯಕ ಲಕ್ಕನಗೌಡರ, ಮತ್ತು ವಿನೋದ ಪಾಟೀಲ ಉಪಸ್ಥಿತರಿದ್ದರು.

ಈ ಸಭೆ ಶಿಕ್ಷಕರಿಗೆ ತಮ್ಮ ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ವಿದ್ಯಾರ್ಥಿಗಳಲ್ಲಿ ಚಿಂತನೆ, ಸಂವಾದ ಹಾಗೂ ಸೃಜನಾತ್ಮಕತೆಯನ್ನು ಉತ್ತೇಜಿಸುವ ಚಟುವಟಿಕೆಗಳನ್ನು ರೂಪಿಸಲು ಸ್ಪೂರ್ತಿಯಾಯಿತು.-

LEAVE A REPLY

Please enter your comment!
Please enter your name here