Home ಕರ್ನಾಟಕ ಯದುವೀರ್​ ರಾಜಮನೆತನಕ್ಕೆ ಮತ್ತೊಂದು ಕುಡಿ ಎಂಟ್ರಿ! 2ನೇ ಗಂಡು ಮಗುವಿಗೆ ತ್ರಿಷಿಕಾ ಜನ್ಮ; ಅಲಮೇಲಮ್ಮ ಯಾಕೆ ಶಾಪ ಸತ್ಯವೋ ಸುಳ್ಳೋ?

ಯದುವೀರ್​ ರಾಜಮನೆತನಕ್ಕೆ ಮತ್ತೊಂದು ಕುಡಿ ಎಂಟ್ರಿ! 2ನೇ ಗಂಡು ಮಗುವಿಗೆ ತ್ರಿಷಿಕಾ ಜನ್ಮ; ಅಲಮೇಲಮ್ಮ ಯಾಕೆ ಶಾಪ ಸತ್ಯವೋ ಸುಳ್ಳೋ?

0
ಯದುವೀರ್​ ರಾಜಮನೆತನಕ್ಕೆ ಮತ್ತೊಂದು ಕುಡಿ ಎಂಟ್ರಿ! 2ನೇ ಗಂಡು ಮಗುವಿಗೆ ತ್ರಿಷಿಕಾ ಜನ್ಮ; ಅಲಮೇಲಮ್ಮ ಯಾಕೆ ಶಾಪ ಸತ್ಯವೋ ಸುಳ್ಳೋ?


ಮೈಸೂರು, ಅಕ್ಟೋಬರ್ 11:ದಸರಾ ಹಬ್ಬದ ಸಂಭ್ರಮದಲ್ಲಿರುವ ಮೈಸೂರು ಯದುವೀರ್​ ರಾಜಮನೆತನಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ರಾಣಿ ತ್ರಿಷಿಕಾ ಕುಮಾರಿ (Trishika Kumari Devi)ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಯುಧ ಪೂಜೆ ದಿನ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರು ಎರಡನೇ ಮಗುವಿಗೆ ತಂದೆಯಾಗಿದ್ದಾರೆ. ರಾಣಿ ತ್ರಿಷಿಕಾ ಕುಮಾರಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯದಿಂದಿದ್ದಾರೆ.


ಆಲಮೇಲಮ್ಮ ಶಾಪದ ಫಲವಾಗಿ ಈ ವರೆಗೂ ಆರು ಜನ ಒಡೆಯರಿಗೆ ಮಕ್ಕಳಾಗದೇ ಇರುವುದರಿಂದ ದತ್ತು ಪಡೆಯುವ ಸಂಪ್ರದಾಯ ಮುಂದುವರೆದುಕೊಂಡು ಬಂದಿತ್ತು ಇದೀಗ ಸಂಸದ ಯದುವೀರ್ ಒಡೆಯರ ಅವರ ಹೆಂಡತಿ ತ್ರಿಷಿಕಾ ಸಿಂಗ್ ಅವರು ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.


16 ನೇ ಶತಮಾನದಲ್ಲಿ ಶ್ರೀರಂಗಪಟ್ಟಣ ಮೈಸೂರು ಸಂಸ್ಥಾನದ ಒಡೆತನದಲ್ಲಿರಲಿಲ್ಲ ವಿಜಯನಗರದ ಸಾಮಂತರ ಒಡೆತನದಲ್ಲಿತ್ತು. ಆ ಸಂದರ್ಭದಲ್ಲಿ ಸಾಮಂತರ ಒಡೆಯ ತಿರುಮಲರಾಜ ಇದರ ರಾಜನಾಗಿದ್ದ ಈತನಿಗೆ ಇಬ್ಬರು ಪತ್ನಿಯರು ಇದ್ದರು. ಎರಡನೇ ಹೆಂಡತಿಯೇ ಈ ಆಲಮೇಲಮ್ಮ ತಿರುಮಲರಾಜನಿಗೆ ಸಂಧಿವಾತ ವಿಪರೀತವಾದಾಗ ಮೂವರು ಜ್ಯೋತಿಷಿಗಳ ಹೇಳಿಕೆಯಂತೆ ರೋಗ ನಿವಾರಣೆಗಾಗಿ ತಲಕಾಡಿಗೆ ಹೋಗುವಂತೆ ಸಲಹೆ ನೀಡಿದರು.
ಆ ಪ್ರಕಾರ ಮೊದಲ ಹೆಂಡತಿ ಕರೆದುಕೊಂಡು ತಲಕಾಡಿಗೆ ಹೊರಟ. ಆ ಸಂದರ್ಭದಲ್ಲಿ ಶ್ರೀರಂಗಪಟ್ಟಣದ ಆಡಳಿತದ ಜವಾಬ್ದಾರಿ ಆಲಮೇಲಮ್ಮ ಹೆಗಲಿಗೆ ಬಿತ್ತು.

ಮೊದಲಿನಿಂದಲೂ ಶ್ರೀರಂಗಪಟ್ಟಣದ ಮೇಲೆ ಕಣ್ಣಿಟ್ಟು ಹೊಂಚು ಹಾಕುತ್ತಿದ್ದ ಮೈಸೂರು ಒಡೆಯರಿಗೆ ಈ ಸಂದರ್ಭದಲ್ಲಿ ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡುವುದು ಅತ್ಯಂತ ಸೂಕ್ತ ಅಂತ ಅನ್ನಿಸಿ ದಾಳಿ ಮಾಡಿದಾಗ ಆಲಮೇಲಮ್ಮ ತನ್ನ ಬಂಗಾರದ ಆಭರಣ ಸಹಿತ ತಲಕಾಡಿನತ್ತ ಓಡಿ ಹೋದಳು ಆ ಸಂದರ್ಭದಲ್ಲಿ ಒಡೆಯರ ಸೈನಿಕರು ಬೆನ್ನತ್ತಿದರು. ಒಡೆಯರಿಗೆ ಆಕೆಯ ಆಭರಣಗಳ ಮೇಲೆ ಕಣ್ಣು ಬಿದ್ದಿತ್ತು.

ತಲಕಾಡಿಗೆ ಹೋದ ತಿರುಮಲ ರಾಜ ಅಲ್ಲಿಯೇ ಪ್ರಾಣ ಬಿಟ್ಟಿದ್ದ. ಈ ಸುದ್ದಿ ಆಲಮೇಲಮ್ಮನಿಗೆ ಆಘಾತ ತಂದಿತ್ತು. ವಿಧವೆ ಬಂಗಾರದ ಆಭರಣಗಳನ್ನು ಧರಿಸುವಂತಿರಲಿಲ್ಲ ಅಲ್ಲದೆ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ಮಡದಿ ರಂಗನಾಯಕಿ ಪೂಜಾ ಸಂದರ್ಭದಲ್ಲಿ ಈ ಒಡವೆಗಳನ್ನು ಮೂರ್ತಿಗೆ ಹಾಕಿ ಪೂಜಾ ನಂತರದಲ್ಲಿ ಪುನಃ ಪಡೆಯುತ್ತಿದ್ದಳು.

ಸದ್ಯ ವಿಧವೆ ಆಗಿರುವ ಆಲಮೇಲಮ್ಮನ ಒಡವೆಗಳನ್ನು ಕಸಿಯುವ ದುರಾಲೋಚನೆ ಹುಟ್ಟಿದ ಒಡೆಯರು ಅವುಗಳನ್ನು ವಶಕ್ಕೆ ಪಡೆಯುವ ಸಲುವಾಗಿ ಸೈನಿಕರನ್ನು ಕಳಿಸಿದರು ಆಕೆ ಇದಕ್ಕೆ ನಿರಾಕರಿಸಿದಾಗ ಒತ್ತಾಯ ಮಾಡಿದರು ಹೀಗಾಗಿ ಆಕೆ ಅವರಿಂದ ತಪ್ಪಿಸಿಕೊಂಡು ಹೊರಟು ದಾರಿ ಕಾಣದೇ ಕಾವೇರಿ ನದಿಗೆ ಆಭರಣ ಸಹಿತ ಹಾರಿ ಬಿಟ್ಟಳು.

ಈ ವೇಳೆ ಆಕೆ ಮೈಸೂರು ಒಡೆಯರಿಗೆ ಶಾಪವನ್ನೂ ಕೊಟ್ಟಿದ್ದಳು ಅಂತ ಹೇಳಲಾಗುತ್ತಿದೆ. ತಲಕಾಡು ಮರಳಾಗಲಿ ಮಾಲಂಗಿ ಮಡುವಾಗಲಿ ಮೈಸೂರು ರಾಜರಿಗೆ ಮಕ್ಕಳಾಗದಿರಲಿ ಅಂತ ಶಾಪ ಕೊಟ್ಟಳು. ಕಾಲಾಂತರದಲ್ಲಿ ಸಮೃದ್ಧ ಹಸಿರಿನಿಂದ ಕಂಗೊಳಿಸುವ ತಲಕಾಡು ಮರಳಿನಿಂದ ಮುಚ್ಚಿ ಹೋಯಿತು ಆಕೆ ಮುಳುಗಿದ ಕಾವೇರಿ ನದಿ‌ ಮಡುವಾಯಿತು ನಂತರ ಮೈಸೂರು ರಾಜರಿಗೆ ಮಕ್ಕಳಾಗದ ಶಾಪವೂ ನಿಜವಾಯಿತು.

ಈ ವರೆಗೂ ಆರು ರಾಜಾ ವಂಶಸ್ಥರಿಗೆ ಸಂತಾನ ಭಾಗ್ಯ ಇಲ್ಲದ ಕಾರಣ ದತ್ತು ಪುತ್ರರ ಮೂಲಕವೇ ಸಂಸ್ಥಾನದ ಆಡಳಿತ ನಿರ್ವಹಣೆ ಮಾಡುತ್ತಿರುವ ರಾಜ ಸಂಸ್ಥಾನದ ಪ್ರಸ್ತುತ ಯದುವೀರ ಒಡೆಯರ ಅವರ ಮೂಲಕ ಅಲಮೇಲಮ್ಮ ನೀಡಿದ ಶಾಪ ಮುಕ್ತವಾಗಿದೆ ಅನ್ನೋದು ಸಾರ್ವಜನಿಕ ಚರ್ಚೆಯಾಗಿದೆ.

ವಿಜಯದಶಮಿ ದಸರಾ ಹಬ್ಬದ ಸಂಭ್ರಮದಲ್ಲಿರುವ ಮೈಸೂರು ಜನತೆಗೆ ಸದ್ಯ ಯದುವೀರ್ ಒಡೆಯರ್ ಅವರು ಎರಡನೇ ಗಂಡು ಮಗುವಿಗೆ ತಂದೆಯಾಗಿರುವ ಸುದ್ದಿ ಡಬಲ್ ಧಮಾಕಾ ನೀಡಿದೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here