
ಬೆಳಗಾವಿ, ಡಿಸೆಂಬರ್ 25: ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಸಿಟಿ ರವಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ಮಧ್ಯೆ ನಡೆದ ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಖಾನಾಪೂರ ಸಿಪಿಐ ಮಂಜುನಾಥ ನಾಯಕ ಅವರನ್ನು ಅಮಾನತ್ತು ಮಾಡಿರುವ ಘಟನೆ ನಡೆದಿದ್ದು ಇದೀಗ ತುಂಬ ಚರ್ಚೆಯಲ್ಲಿದೆ.
ಸಚಿವೆ ಹೆಬ್ಬಾಳಕರ ಅವರನ್ನು ನಿಂದಿಸಿರುವ ಆರೋಪದ ಮೇರೆಗೆ ಹಿರೇಬಾಗೇವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಪ್ರಯುಕ್ತ ಸಿಟಿ ರವಿ ಅವರನ್ನು ಬಂಧಿಸಲಾಗಿತ್ತು ಖುದ್ದು ಬೆಳಗಾವಿ ಪೋಲಿಸ್ ಕಮಿಷನರ್ ಯಡಾ ಮಾರ್ಟಿನ್ ಅವರೇ ಅವರನ್ನು ಖಾನಾಪೂರ ಪೋಲಿಸ್ ಠಾಣೆಗೆ ಕರೆದೊಯ್ದಿದ್ದರು ಎನ್ನಲಾಗುತ್ತಿದೆ.
ಅಲ್ಲದೇ ಇಡೀ ರಾತ್ರಿ ಮೂರು ಜಿಲ್ಲಾ ವ್ಯಾಪ್ತಿಯಲ್ಲಿ ಅವರನ್ನು ರೌಂಡ್ಸ್ ಹಾಕಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದೀಗ ಈ ಪ್ರಕರಣದಲ್ಲಿ ಸರ್ಕಾರ ಖಾನಾಪೂರ ಸಿಪಿಐ ಮಂಜುನಾಥ ನಾಯಕ ಅವರನ್ನು ಸಸ್ಪೆಂಡ್ ಮಾಡುವ ಮೂಲಕ ಪ್ರಕರಣಕ್ಕೆ ತೆರೆ ಎಳೆದಂತೆ ಕಾಣುತ್ತಿದೆ.ಮೇಲ್ನೋಟಕ್ಕೆ ಸಿಪಿಐ ಅಮಾನತ್ತು ಮಾಡುವುದಾದರೆ ಅವರ ತಪ್ಪಾದರೂ ಏನು ಅನ್ನೋದು ಇಲ್ಲಿ ಸಂಶಯಕ್ಕೆ ಕಾರಣವಾಗಿದೆ.
ಪ್ರಕರಣ ದಾಖಲಾಗಿದ್ದು ಹಿರೇ ಬಾಗೇವಾಡಿ ಠಾಣೆಯಲ್ಲಿ ಅರೆಸ್ಟ್ ಮಾಡಿದ್ದು ಬೇರೆಯವರು ಖಾನಾಪೂರಕ್ಕೆ ಕರೆದೊಯ್ದಿದ್ದು ಪೋಲಿಸ್ ಕಮೀಷನರ್ ಇದರಲ್ಲಿ ಸಿಪಿಐ ಮಂಜುನಾಥ ನಾಯಕ ಅವರ ತಪ್ಪಾದರೂ ಏನು ಅನ್ನೋ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಇದೀಗ ಸಿಪಿಐ ಸಸ್ಪೆಂಡ್ ಪ್ರಕರಣಕ್ಕೆ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದು ನಾಳೆ ಖಾನಾಪೂರ ಬಂದ್ ಮಾಡುವುದಾಗಿ ಘೋಷಿಸಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಸರ್ಕಾರದ ಈ ನಡುವಳಿಕೆ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತಾಗಿದೆ ಅನ್ನೋದು ಸಾರ್ವಜನಿಕರ ಅಭಿಪ್ರಾಯ ಆಗಿದೆ.
ಸಿಪಿಐ ಅವರಿಗೆ ಶಿಕ್ಷೆ ಆಗುವುದೇ ಆದಲ್ಲಿ ಈ ಪ್ರಕರಣದಲ್ಲಿ ಭಾಗಿಯಾದ ಪೋಲಿಸ್ ಇಲಾಖೆ ಮೇಲಾಧಿಕಾರಿಗಳ ಮೇಲೂ ಶಿಸ್ತಿನ ಕ್ರಮ ಆಗಬೇಕಲ್ಲವೇ ಅನ್ನೋ ಪ್ರಶ್ನೆ ಎದುರಾಗಿದೆ.