Home COVID|HMPV ರಾಜ್ಯದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ದೃಢ!ಕಾರ್ಕಳದ ನಿವಾಸಿಗೆ ಮಂಕಿಪಾಕ್ಸ್ !

ರಾಜ್ಯದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ದೃಢ!ಕಾರ್ಕಳದ ನಿವಾಸಿಗೆ ಮಂಕಿಪಾಕ್ಸ್ !

0
ರಾಜ್ಯದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ದೃಢ!ಕಾರ್ಕಳದ ನಿವಾಸಿಗೆ ಮಂಕಿಪಾಕ್ಸ್ !

ಬೆಂಗಳೂರು: ರಾಜ್ಯದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದೆ. 40 ವರ್ಷದ ಉಡುಪಿ ಜಿಲ್ಲೆಯ ಕಾರ್ಕಳದ ನಿವಾಸಿಗೆ ಮಂಕಿಪಾಕ್ಸ್ ತಗುಲಿದೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆರೋಗ್ಯ ಇಲಾಖೆ, ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಮಂಕಿಪಾಕ್ಸ್ ಸೋಂಕು ಇರುವುದನ್ನು ಖಚಿತಪಡಿಸಿದೆ.

ಸೋಂಕಿತ 19 ವರ್ಷದಿಂದ ದುಬೈಯಲ್ಲಿ ವಾಸವಾಗಿದ್ದು, ಜನವರಿ 17ಕ್ಕೆ ಮಂಗಳೂರಿಗೆ ಆಗಮಿಸಿದ್ದರು. ಅವರಿಗೆ ತುರಿಕೆ ಹಾಗೂ ಜೊತೆಗೆ ಜ್ವರದ ಲಕ್ಷಣ ಕಂಡು ಬಂದಿತ್ತು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಯಿತು.

ಅವರ ರಕ್ತದ ಮಾದರಿಯನ್ನು ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಿಕೊಡಲಾಗಿತ್ತು.ಮಂಕಿಪಾಕ್ಸ್ ಲಘು ರೋಗ ಲಕ್ಷಣ: ಸೋಂಕಿತ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಕಂಡು ಬಂದಿಲ್ಲ.

ಶೀಘ್ರದಲ್ಲೇ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಸಾಮಾನ್ಯವಾಗಿ ಬಹುತೇಕ ಪ್ರಕರಣಗಳಲ್ಲಿ ಮಂಕಿಪಾಕ್ಸ್ ಲಘುವಾದ ರೋಗ ಲಕ್ಷಣ ಇರುವ ಸೋಂಕಾಗಿದೆ.

ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಹಾಗೂ ಬಹುರೋಗ ಲಕ್ಷಣ ಇರುವವರಲ್ಲಿ ಮಂಕಿಪಾಕ್ಸ್ ತೀವ್ರತೆ ಕಾಣುತ್ತದೆ ಎಂದು ತಿಳಿಸಿದೆ.

LEAVE A REPLY

Please enter your comment!
Please enter your name here