Home ಕರ್ನಾಟಕ ಸಂಸದ ತೇಜಸ್ವಿ ಸೂರ್ಯ Marriage Fix! Finally fix ಆದ ಹುಡುಗಿ ಇವರೇ; ಯಾರು ಈ ಶಿವಶ್ರೀ?

ಸಂಸದ ತೇಜಸ್ವಿ ಸೂರ್ಯ Marriage Fix! Finally fix ಆದ ಹುಡುಗಿ ಇವರೇ; ಯಾರು ಈ ಶಿವಶ್ರೀ?

0
ಸಂಸದ ತೇಜಸ್ವಿ ಸೂರ್ಯ Marriage Fix! Finally fix ಆದ ಹುಡುಗಿ ಇವರೇ; ಯಾರು ಈ ಶಿವಶ್ರೀ?

ಬೆಂಗಳೂರು, ಫೆ18: ಗಾಯಕಿ, ಭರತ ನಾಟ್ಯ ಕಲಾವಿದೆಯೊಂದಿಗೆ ಸಂಸದ ತೇಜಸ್ವಿ ಸೂರ್ಯ ಮದುವೆಯಾಗುತ್ತಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (MP Tejasvisurya)ಇದೀಗ ಹಲವರ ಪ್ರಶ್ನೆಗಳಿಗೆ ಕೊನೆಗೂ ತೆರೆ ಎಳೆದಿದ್ದಾರೆ.

ಇಷ್ಟರವರೆಗೆ ಮೌನವಾಗಿದ್ದ ತೇಜಸ್ವಿ ಸೂರ್ಯ, ಇದೀಗ ಚೆನ್ನೈ ಮೂಲದ ಗಾಯಕಿ ಮತ್ತು ಭರತನಾಟ್ಯ ಕಲಾವಿದೆ ಶಿವಶ್ರೀ ಸ್ಕಂದ ಪ್ರಸಾದ್‌ (shivashri skanda prasad)ಎನ್ನುವವರನ್ನು ಮದುವೆಯಾಗಲಿದ್ದಾರೆ.

ಮಾರ್ಚ್‌ನಲ್ಲಿ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಹಸೆಮಣೆ ಏರಲಿದ್ದಾರೆ ಎನ್ನಲಾಗಿತ್ತು. ಇದೀಗ ಡೇಟ್‌ ಕೂಡಾ ಅನೌನ್ಸ್ ಆಗಿದ್ದು, ಇದೇ ಮಾರ್ಜ್‌ 9 ರಂದು ತೇಜಸ್ವಿ ವಿವಾಹವಾಗಲಿದ್ದಾರೆ.

ಶಿವಶ್ರೀ ಸ್ಕಂದ ಪ್ರಸಾದ್ ಮೂಲತಃ ಚೆನ್ನೈಯವರು. ಅವರು ಶಾಸ್ತ್ರೀಯ ಸಂಗೀತ ಗಾಯಕಿ ಮತ್ತು ಭರತನಾಟ್ಯ ಕಲಾವಿದೆ. ಅವರು ಶಾಸ್ತ್ರ ವಿಶ್ವವಿದ್ಯಾಲಯದಿಂದ ಬಯೋ ಇಂಜಿನಿಯರಿಂಗ್‌ನಲ್ಲಿ ಬಿ. ಟೆಕ್ ಪದವಿಯನ್ನು ಪಡೆದಿದ್ದಾರೆ.

ಇದರೊಂದಿಗೆ ಅವರು ಚೆನ್ನೈ ವಿಶ್ವವಿದ್ಯಾನಿಲಯದಿಂದ ಭರತನಾಟ್ಯದಲ್ಲಿ ಎಂಎ ಪದವಿಯನ್ನೂ ಮತ್ತು ಚೆನೈ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಎಂಎ ಪದವಿಯನ್ನು ಪಡೆದಿದ್ದಾರೆ.

LEAVE A REPLY

Please enter your comment!
Please enter your name here