Home ಕರ್ನಾಟಕ ಸರ್ಕಾರಕ್ಕೆ ತಲೆನೋವಾದ ಡಿಸೆಂಬರ್! ಸಮ್ಮೇಳನ, ಅಧಿವೇಶನ, ಕಾಂಗ್ರೆಸ್ ಸೆಷನ್ ಸೆಲೆಬ್ರೇಷನ್; ಯಾವಾಗ ಚಳಿಗಾಲ ಅಧಿವೇಶನದ ಡೇಟ್ ಕನ್ಫರ್ಮ್?

ಸರ್ಕಾರಕ್ಕೆ ತಲೆನೋವಾದ ಡಿಸೆಂಬರ್! ಸಮ್ಮೇಳನ, ಅಧಿವೇಶನ, ಕಾಂಗ್ರೆಸ್ ಸೆಷನ್ ಸೆಲೆಬ್ರೇಷನ್; ಯಾವಾಗ ಚಳಿಗಾಲ ಅಧಿವೇಶನದ ಡೇಟ್ ಕನ್ಫರ್ಮ್?

0
ಸರ್ಕಾರಕ್ಕೆ ತಲೆನೋವಾದ ಡಿಸೆಂಬರ್! ಸಮ್ಮೇಳನ, ಅಧಿವೇಶನ, ಕಾಂಗ್ರೆಸ್ ಸೆಷನ್ ಸೆಲೆಬ್ರೇಷನ್; ಯಾವಾಗ ಚಳಿಗಾಲ ಅಧಿವೇಶನದ ಡೇಟ್ ಕನ್ಫರ್ಮ್?

ಬೆಂಗಳೂರು, ಅಕ್ಟೋಬರ್ 18 : ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸಂಭ್ರಮಾಚರಣೆ ಬೆಳಗಾವಿಯಲ್ಲಿ ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯಲಿದೆ. ಅದೇ ಡಿಸೆಂಬರ್ 20 ರಿಂದ ಮಂಡ್ಯದಲ್ಲಿ 3 ದಿನಗಳ ಕಾಲ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ನಡುವೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಬೇಕಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡುವ ಕುರಿತು ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.

ಸಾಹಿತ್ಯ ಸಮ್ಮೇಳನವು 2024 ಫೆಬ್ರವರಿ ತಿಂಗಳಿನಲ್ಲೇ ನಡೆಯಬೇಕಿತ್ತು. ಆದರೆ, ಬರಗಾಲ ಹಾಗೂ ಮತ್ತಿತರ ಕಾರಣಗಳಿಂದ ಒಂದೆರಡು ಬಾರಿ ಮುಂದೂಡಲಾಗಿತ್ತು. ಇದೀಗ ಡಿಸೆಂಬರ್ 20-23ರವರೆಗೆ ನಡೆಸಲು ನಿರ್ಧರಿಸಲಾಗಿದೆ.

ಇದೇ ವೇಳೆ, 1924 ರ ಡಿ.26 ಮತ್ತು 27 ರಂದು ಬೆಳಗಾವಿಯಲ್ಲಿ ನಡೆದಿದ್ದ 39ನೇ ಕಾಂಗ್ರೆಸ್‌ ಅಧಿವೇಶನ ಉದ್ದೇಶಿಸಿ ಮಹಾತ್ಮ ಗಾಂಧೀಜಿ ಭಾಷಣ ಮಾಡಿದ್ದರು. ಈ ಕಾರ್ಯಕ್ರಮ ನಡೆದು 100 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಡಿ.26 ಮತ್ತು 27 ರಂದು ಬೆಳಗಾವಿಯಲ್ಲೇ ಕಾಂಗ್ರೆಸ್‌ ಅಧಿವೇಶನ ನಡೆಸಲು ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ ಚಳಿಗಾಲ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡುವಲ್ಲಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.

LEAVE A REPLY

Please enter your comment!
Please enter your name here