Home ರಾಷ್ಟೀಯ 5 ನೇತ್ತೆ 8ನೇತ್ತೆ ಫೇಲಾದ್ರೆ ಅದೇ ತರ’ಗತಿ’..! ಫೇಲ್ ನಿಯಮ ಜಾರಿಗೊಳಿಸಿದ ಶಿಕ್ಷಣ ಇಲಾಖೆ!

5 ನೇತ್ತೆ 8ನೇತ್ತೆ ಫೇಲಾದ್ರೆ ಅದೇ ತರ’ಗತಿ’..! ಫೇಲ್ ನಿಯಮ ಜಾರಿಗೊಳಿಸಿದ ಶಿಕ್ಷಣ ಇಲಾಖೆ!

0
5 ನೇತ್ತೆ 8ನೇತ್ತೆ ಫೇಲಾದ್ರೆ ಅದೇ ತರ’ಗತಿ’..! ಫೇಲ್ ನಿಯಮ ಜಾರಿಗೊಳಿಸಿದ ಶಿಕ್ಷಣ ಇಲಾಖೆ!

ನವದೆಹಲಿ, ಡಿಸೆಂಬರ್ 24: ಕೇಂದ್ರ ಸರ್ಕಾರ ಶಾಲಾ ಶಿಕ್ಷಣ ನೀತಿಯಲ್ಲಿ ಹೊಸ ಬದಲಾವಣೆ ರೂಪಿಸಲಾಗಿದ್ದು ಕಲಿಕೆಯಲ್ಲಿ ಹಿಂದುಳಿದ 5ನೇ ತರಗತಿ ಹಾಗೂ 8ನೇ ತರಗತಿ ವಿದ್ಯಾರ್ಥಿಗಳನ್ನು ಫೇಲ್ ಮಾಡಬಹುದು ಅನ್ನೋ ಹೊಸ ನಿಯಮ ಜಾರಿಗೊಳಿಸಲಾಗಿದೆ.

ಹೊಸ ನಿಯಮದ ಪ್ರಕಾರ 5 ಹಾಗೂ 8 ನೇ ತರಗತಿಗೆ ವಾರ್ಷಿಕ ಪರೀಕ್ಷೆ ನಡೆಸಲಾಗುತ್ತಿದ್ದು ಇದರಲ್ಲಿ ಫೇಲ್ ಆದರೆ 2 ತಿಂಗಳು ಹೆಚ್ಚುವರಿ ಕಲಿಕಾ ತರಬೇತಿ ನೀಡಲು ಅವಕಾಶ ನೀಡಿ ಪುನಃ ಪರೀಕ್ಷೆ ಎದುರಿಸಲು ಅವಕಾಶ ಕಲ್ಪಿಸಲಾಗಿದೆ ಅದರಲ್ಲೂ ಫೇಲ್ ಆದರೆ ಹಿಂದಿನ ತರಗತಿಯಲ್ಲೇ ಉಳಿಸತಕ್ಕದ್ದು ಅನ್ನೋ ನಿಯಮ ಜಾರಿಗೆ ತರಲಾಗಿದೆ.

ಈ ಹಿಂದಿನ ಆದೇಶದಂತೆ 8ನೇ ತರಗತಿವರೆಗೆ ಯಾವುದೇ ವಿದ್ಯಾರ್ಥಿಯನ್ನು ಫೇಲ್ ಮಾಡುವಂತಿಲ್ಲ ಎಂಬ ಆದೇಶ ರೂಪಿಸಲಾಗಿತ್ತು ಇದಕ್ಕೆ ಈಗ ಪರಿಷ್ಕೃತ ಆದೇಶ ಹೊರಡಿಸಲಾಗಿದೆ. ಕೇರಳ ಸರ್ಕಾರ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಮಕ್ಕಳ ಮೇಲೆ ಮಾನಸಿಕ ಒತ್ತಡ ಹೆಚ್ಚಲಿದೆ ಹೀಗಾಗಿ ಪರಿಷ್ಕೃತ ಆದೇಶ ಹಿಂಪಡೆಯುವಂತೆ ಒತ್ತಾಯಿಸಿದೆ.

ರಾಜ್ಯ ಸರ್ಕಾರದಲ್ಲಿ ಈ ಬಗ್ಗೆ ಚರ್ಚೆ ಕೈಕೊಂಡು ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here