Home ಕರ್ನಾಟಕ ‘ಬಿಗ್ ಬಾಸ್’ ವಿನ್ನರ್ ಮಂಜು ಪಾವಗಡ ನಿಶ್ಚಿತಾರ್ಥ! ಸದ್ದಿಲ್ಲದೆೇ ಸಿಹಿ ಸುದ್ದಿ ಕೊಟ್ಟ ಕಾಮಿಡಿ ಸ್ಟಾರ್!

‘ಬಿಗ್ ಬಾಸ್’ ವಿನ್ನರ್ ಮಂಜು ಪಾವಗಡ ನಿಶ್ಚಿತಾರ್ಥ! ಸದ್ದಿಲ್ಲದೆೇ ಸಿಹಿ ಸುದ್ದಿ ಕೊಟ್ಟ ಕಾಮಿಡಿ ಸ್ಟಾರ್!

0
‘ಬಿಗ್ ಬಾಸ್’ ವಿನ್ನರ್ ಮಂಜು ಪಾವಗಡ ನಿಶ್ಚಿತಾರ್ಥ! ಸದ್ದಿಲ್ಲದೆೇ ಸಿಹಿ ಸುದ್ದಿ ಕೊಟ್ಟ ಕಾಮಿಡಿ ಸ್ಟಾರ್!

ಬೆಂಗಳೂರು, ಅಕ್ಟೋಬರ್ 05: ‘ಮಜಾ ಭಾರತ’ ಕಾಮಿಡಿ ಶೋ ಮೂಲಕ ಜನರ ಮನ ಗೆದ್ದ ಮಂಜು ಪಾವಗಡ ‘ಬಿಗ್ ಬಾಸ್’ ವಿನ್ನರ್ ಪಟ್ಟಕ್ಕೇರಿದರು. ‘ಬಿಗ್ ಬಾಸ್’ ಬಳಿಕ ಸಿನಿಮಾಗಳಲ್ಲಿ ಹಾಗೂ ಸೀರಿಯಲ್‌ಗಳಲ್ಲಿ ಮಂಜು ಪಾವಗಡ ಬಿಜಿಯಾಗಿದ್ದಾರೆ. ಹೀಗಿರುವಾಗಲೇ, ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಮಂಜು ಪಾವಗಡ.

‘ಮಜಾ ಭಾರತ’, ‘ಗಿಚ್ಚಿ ಗಿಲಿಗಿಲಿ’ ಮುಖಾಂತರ ಕನ್ನಡಿಗರ ಮನೆ ಮಾತಾದ ಹಾಸ್ಯ ಕಲಾವಿದ ಮಂಜು ಪಾವಗಡ. ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ಮಂಜು ಪಾವಗದ ಮನರಂಜನೆ ನೀಡುವುದರಲ್ಲಿ ಮುಂದಿದ್ದರು, ಟಾಸ್ಕ್‌ಗಳಲ್ಲೂ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ದರು.

ಹೌದು.. ಮಂಜು ಪಾವಗಡ ಅವರ ಎಂಗೇಜ್‌ಮೆಂಟ್‌ ನೆರವೇರಿದೆ. ನಂದಿನಿ ಎಂಬುವರನ್ನ ಮಂಜು ಪಾವಗಡ ಮದುವೆಯಾಗುತ್ತಿದ್ದಾರೆ. ಇದು ಅರೇಂಜ್ಡ್ ಮ್ಯಾರೇಜ್ ಆಗಿದ್ದು, ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಮಂಜು ಪಾವಗಡ ಮತ್ತು ನಂದಿನಿ ಉಂಗುರ ಬದಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here