Home ಕರ್ನಾಟಕ ಮಾಣಿಕ್ಯ ಪ್ರಕಾಶನ ಸಂಸ್ಥೆ ದತ್ತಿ ನಿಧಿ ಪ್ರಶಸ್ತಿ ಪ್ರಕಟ

ಮಾಣಿಕ್ಯ ಪ್ರಕಾಶನ ಸಂಸ್ಥೆ ದತ್ತಿ ನಿಧಿ ಪ್ರಶಸ್ತಿ ಪ್ರಕಟ

0
ಮಾಣಿಕ್ಯ ಪ್ರಕಾಶನ ಸಂಸ್ಥೆ ದತ್ತಿ ನಿಧಿ ಪ್ರಶಸ್ತಿ ಪ್ರಕಟ

ಹಾಸನ, ಅಕ್ಟೋಬರ್ 13: ಇಲ್ಲಿನ ‘ಮಾಣಿಕ್ಯ ಪ್ರಕಾಶನ ಸಂಸ್ಥೆ’ಯು 2024 ರ ವಿವಿಧ ದತ್ತಿ ಪುರಸ್ಕಾರಗಳನ್ನು ಪ್ರಕಟಿಸಿದೆ.

2023 ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ವಿವಿಧ ಪ್ರಕಾರದ ಅರ್ಹ ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ದಿ.ಸಿ.ಪಿ.ನಾರಾಯಣಚಾರ್ಯ ಸ್ಮಾರಕ ದತ್ತಿ – ಕಾವ್ಯ ಮಾಣಿಕ್ಯ ಪ್ರಶಸ್ತಿ 2024 (ಕಾವ್ಯ) ವಿಜಯಪುರ ಜಿಲ್ಲೆಯ ಸುಮಿತ್ ಮೇತ್ರಿ ಅವರ ‘ಈ ಕಣ್ಣುಗಳಿಗೆ ಸದಾ ನೀರಡಿಕೆ’ ಪ್ರಥಮ, ಹಾಸನ ಜಿಲ್ಲೆಯ ನಂದಿನಿ ಹೆದ್ದುರ್ಗ ಅವರ ‘ಒಂದು ಆದಿಮ ಪ್ರೇಮ’ ದ್ವಿತೀಯ, ಬೆಳಗಾವಿ ಜಿಲ್ಲೆಯ ಸಂತೋಷ ನಾಯಿಕ ಅವರ ‘ಹೊಸ ವಿಳಾಸದ ಹೆಜ್ಜೆಗಳು’ ತೃತೀಯ. ಎನ್. ಶೈಲಜಾ ಹಾಸನ ದತ್ತಿ – ಪ್ರಬಂಧ ಮಾಣಿಕ್ಯ ಪ್ರಶಸ್ತಿ 2024 (ಲಲಿತ ಪ್ರಬಂಧ ವಿಭಾಗ) : ಹಾಸನ ಜಿಲ್ಲೆಯ ಸುಮಾ ವೀಣಾ ಅವರ ‘ಮಧುರಾನುಭೂತಿಯ ಬುತ್ತಿ’. ಪದ್ಮಾವತಿ ವೆಂಕಟೇಶ್ ದತ್ತಿ – ಕಥಾ ಮಾಣಿಕ್ಯ ಪ್ರಶಸ್ತಿ 2024 (ಕಥಾ ವಿಭಾಗ): ಕೊಪ್ಪಳ ಜಿಲ್ಲೆಯ ಅನಸೂಯ ಜಹಗೀರದಾರ್‌ ಅವರ ‘ಪರಿವರ್ತನೆ’. ದಿ.ಶಾಂತಮ್ಮ ನಾಗರಾಜ್ ಸ್ಮಾರಕ ದತ್ತಿ – ಹಾಸ್ಯ ಮಾಣಿಕ್ಯ ಪ್ರಶಸ್ತಿ 2024 (ಹಾಸ್ಯ ಪ್ರಬಂಧ ವಿಭಾಗ): ಹಾಸನ ಜಿಲ್ಲೆಯ ಸುಮಾ ರಮೇಶ್ ಅವರ ‘ಹಚ್ಛೆ ದಿನ್’. ದಿ.ನಿಂಗಪ್ಪ ಮಲ್ಲಪ್ಪ ಮೇಟಿ ಸ್ಮಾರಕ ದತ್ತಿ – ಗದ್ಯ ಮಾಣಿಕ್ಯ ಪ್ರಶಸ್ತಿ 2024 (ಸಂಕೀರ್ಣ ವಿಭಾಗ): ಉತ್ತರ ಕನ್ನಡ ಜಿಲ್ಲೆಯ ಜಿಲ್ಲೆಯ ಶಿವಲೀಲಾ ಹುಣಸಗಿಯವರ ‘ಗೋರಿಯ ಸುತ್ತ ಸಪ್ತಪದಿ ತುಳಿದಾಗ’ ಕೃತಿ ಭಾಜನವಾಗಿದೆ.

ಎಲ್ಲಾ ಪ್ರಶಸ್ತಿ ಪುಸ್ಕೃತರಿಗೆ ಮಾಣಿಕ್ಯ ಪ್ರಕಾಶನ ನ.10ರಂದು ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here