
ಚನ್ನಮ್ಮನ ಕಿತ್ತೂರು,ಅಕ್ಟೋಬರ್ 16 : ವಿಶ್ವ ಪ್ರಜಾಪ್ರಭುತ್ವ ದಿನದ ಅಂಗವಾಗಿ ನಡೆದ ಮಾನವ ಸರಪಳಿ ಕಾರ್ಯಕ್ರಮ ಯಶಸ್ವಿಯಾದ ಹಿನ್ನೆಲೆ, ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಕಿತ್ತೂರು ತಾಲೂಕಿನ ಮಹಿಳಾ ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಕಿತ್ತೂರು ಮತಕ್ಷೇತ್ರದ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಪ್ರಶಂಸನಾ ಪತ್ರ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಅಕ್ಟೋಬರ್ 23 ರಿಂದ 25 ರವರೆಗೆ ನಡೆಯುವ 200 ವರ್ಷದ ಕಿತ್ತೂರು ಉತ್ಸವವನ್ನು ಯಶಸ್ವಿ ಗೊಳಿಸುವ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಮಹಿಳಾ ಸ್ವ ಸಹಾಯ ಸಂಘದವರು ಸ್ವಯಂ ಸೇವಕರಾಗಿ ಪಾಲ್ಗೊಂಡು ಎಲ್ಲಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯುವಂತೆ ಕೆಲಸ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ರವೀಂದ್ರ ಹಾದಿಮನಿ, ತಾ.ಪಂ. ಇಓ ಕಿರಣ್ ಘೋರ್ಪಡೆ, ಟಿಪಿಎಂ ಪ್ರಕಾಶ ಗುಂಡಗಾವಿ,ನಾಗನಗೌಡ ಪಾಟೀಲ್, ಲಕ್ಷ್ಮೀ ವಾಲಿಕಾರ ಸೇರಿದಂತೆ ಇತರರು ಹಾಜರಿದ್ದರು.