
ಬೆಂಗಳೂರು, ಅಕ್ಟೊಬರ್ 22: ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದರೊಂದಿಗೆ ಭಾಷಾ ಕೌಶಲ್ಯವನ್ನು ಅಭಿವೃದ್ಧಿಗೊಳಿಸಲು ಶಿಕ್ಷಣ ಇಲಾಖೆ ನವೆಂಬರ್ 4ರಿಂದ 2025ರ ಫೇಬ್ರುವರಿ 11ರವರೆಗೆ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ”100ದಿನಗಳು ಓದುವ ಆಂದೋಲನ” ಹಮ್ಮಿಕೊಂಡಿದೆ.

ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿನ 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಅನ್ವಯಿಸುವಂತೆ 3 ಗುಂಪುಗಳಲ್ಲಿ ಅನುಷ್ಠಾನಗೊಳಿಸಲು 2023-24ನೇ ಸಾಲಿನ PAB Plan Document ನಲ್ಲಿ ಈ ಆಂದೋಲನ ಯೋಜಿಸಲಾಗಿದೆ.

ಆಂದೋಲನ ಸಂಬಂಧಿಸಿದ ಉತ್ತಮ ಫೋಟೋ ಮತ್ತು ವಿಡಿಯೋಗಳನ್ನು https://docs.google.com/spreadsheets/d/1SMeKgUyKPCmOrkAY89XK79n RudxeS1aGZR4cL8uYaU/edit?usp=sharing ಈ ಗೂಗಲ್ ಟ್ರಾಕರ್ ನಲ್ಲಿ ಅಪ್ ಲೋಡ್ ಮಾಡಲು ಸೂಚಿಸಲಾಗಿದೆ.