Home ಸ್ಥಳೀಯ ಅಕ್ಟೊಬರ್ 23ರಿಂದ 25ರವರೆಗೆ ಕಿತ್ತೂರು, ಬೈಲಹೊಂಗಲದ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

ಅಕ್ಟೊಬರ್ 23ರಿಂದ 25ರವರೆಗೆ ಕಿತ್ತೂರು, ಬೈಲಹೊಂಗಲದ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

0
ಅಕ್ಟೊಬರ್ 23ರಿಂದ 25ರವರೆಗೆ ಕಿತ್ತೂರು, ಬೈಲಹೊಂಗಲದ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

ಚನ್ನಮ್ಮನ ಕಿತ್ತೂರು, ಅಕ್ಟೊಬರ್ 22: ಕಿತ್ತೂರು ಉತ್ಸವ-2024″ ರ 200 ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕಿತ್ತೂರು ಹಾಗೂ ಬೈಲಹೊಂಗಲ ತಾಲೂಕಿನ ಶೈಕ್ಷಣಿಕ ವಲಯದ ಎಲ್ಲಾ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಅಕ್ಟೊಬರ್ 23ರಿಂದ 25ರವರೆಗೆ ರಜೆ ಘೋಷಿಸಲಾಗಿದೆ.

ಉತ್ಸವದಲ್ಲಿ ಗಣ್ಯರು, ಶಾಲಾ ಮಕ್ಕಳು, ಮಹಿಳೆಯರು ಹಾಗೂ ವೈದ್ಯರು ಹೀಗೆ ಲಕ್ಷಾಂತರ ಜನ ಭಾಗವಹಿಸುವವರಿರುತ್ತಾರೆ. ಹೀಗಾಗಿ ಕಿತ್ತೂರು ಹಾಗೂ ಬೈಲಹೊಂಗಲ ತಾಲೂಕಿನ ಕೆಲವು ಶಾಲಾ ಕಾಲೇಜುಗಳನ್ನು ಉತ್ಸವದ ಅಂಗವಾಗಿ ಜಿಲ್ಲಾಡಳಿತದ ಸುಪರ್ದಿಗೆ ಪಡೆದುಕೊಂಡು ಉತ್ಸವದಲ್ಲಿ ಪಾಲ್ಗೊಳ್ಳುವ ಕಲಾವಿದರು, ಕ್ರೀಡಾಪಟುಗಳಿಗೆ ವಸತಿ ಕಲ್ಪಿಸಲಗುತ್ತಿದೆ ಎಂದು ಜಿಲ್ಲಾಧಿಕಾರಿ ರೋಷನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here