Home ಸ್ಥಳೀಯ ಹರ್ಷ ಸಕ್ಕರೆ ಕಾರ್ಖಾನೆ ಬಾಯ್ಲರ್ ಪ್ರದೀಪನ! 11ರೈತರಿಗೆ ಸನ್ಮಾನ; ಕಾರ್ಯಕ್ರಮಕ್ಕೆ ಸಾಕ್ಷಿಯಾದ ರೈತಗಣ!

ಹರ್ಷ ಸಕ್ಕರೆ ಕಾರ್ಖಾನೆ ಬಾಯ್ಲರ್ ಪ್ರದೀಪನ! 11ರೈತರಿಗೆ ಸನ್ಮಾನ; ಕಾರ್ಯಕ್ರಮಕ್ಕೆ ಸಾಕ್ಷಿಯಾದ ರೈತಗಣ!

0
ಹರ್ಷ ಸಕ್ಕರೆ ಕಾರ್ಖಾನೆ ಬಾಯ್ಲರ್ ಪ್ರದೀಪನ! 11ರೈತರಿಗೆ ಸನ್ಮಾನ; ಕಾರ್ಯಕ್ರಮಕ್ಕೆ ಸಾಕ್ಷಿಯಾದ ರೈತಗಣ!

ಸವದತ್ತಿ, ನವೆಂಬರ್ 08: ಸವದತ್ತಿಯ ನಮ್ಮ ಹರ್ಷ ಸಕ್ಕರೆ ಕಾರ್ಖಾನೆಯಲ್ಲಿ ಹೂಲಿ ಸಾಂಬಯ್ಯನವರ ಮಠದ ಶ್ರೀ ಉಮೇಶ್ವರ ಶಿವಾಚಾರ್ಯ ಅಜ್ಜನವರ ಅಮೃತ ಹಸ್ತದಿಂದ ಇವತ್ತು 2024-2025 ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಹಾಗೂ ಬಾಯ್ಲರ್ ಪ್ರದೀಪನ ಸಮಾರಂಭಕ್ಕೆ ಚಾಲನೆಯನ್ನು ನೀಡಲಾಯಿತು.

ಇದೇ ಸಮಯದಲ್ಲಿ ಹರ್ಷ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶ್ರೀಮತಿ Laxmi Hebbalkar ಅವರ ಆಶಯ ಹಾಗೂ ಮಾರ್ಗದರ್ಶನದಂತೆ 2023-2024 ನೇ ಸಾಲಿನ ಹಂಗಾಮಿನಲ್ಲಿ ಕಾರ್ಖಾನೆಗೆ ಅತೀ ಹೆಚ್ಚು ಕಬ್ಬು ಪೂರೈಕೆ ಮಾಡಿದ 11 ಜನ ಪ್ರಗತಿಪರ ರೈತರನ್ನು ಗುರುತಿಸಿ, ತುಂಬು ಹೃದಯದಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗಿರಿಜಾ ಬ ಹಟ್ಟಿಹೊಳಿ, ಭಾರತಿ ಕಲ್ಲೂರ್, ಬಾಬಣ್ಣ ಕಲ್ಲೂರ್, ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕರಾದ ಸದಾಶಿವ್ ತೋರಾಥ್, ಕಬ್ಬು ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಎನ್ ಎಮ್ ಪಾಟೀಲ, ಎಥೆನಾಲ್ ಘಟಕದ ವ್ಯವಸ್ಥಾಪಕರಾದ ಸಾಂಬ್ರೇಕರ್, ಕಾರ್ಖಾನೆಯ ಮುಖ್ಯ ಆಡಳಿತಾಧಿಕಾರಿ ಚೌಕಿಮಠ್, ಕಾರ್ಖಾನೆಯ ಎಲ್ಲ ವಿಭಾಗದ ಸಿಬ್ಬಂದಿಯವರು, ಬೈಲಹೊಂಗಲ, ಸವದತ್ತಿ, ಕಿತ್ತೂರು ಹಾಗೂ ಧಾರವಾಡ ಭಾಗದ ಪ್ರಮುಖ ರೈತ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here