Home ರಾಜಕೀಯ ಚೊಚ್ಚಲ ಚುನಾವಣಾ ಸ್ಪರ್ಧೆಯಲ್ಲೇ ಪ್ರಿಯಾಂಕಾ ಗಾಂಧಿ ಭರ್ಜರಿ ಜಯ! 4,04,619 ಮತಗಳ ಭಾರೀ ಅಂತರದ ಗೆಲುವು!

ಚೊಚ್ಚಲ ಚುನಾವಣಾ ಸ್ಪರ್ಧೆಯಲ್ಲೇ ಪ್ರಿಯಾಂಕಾ ಗಾಂಧಿ ಭರ್ಜರಿ ಜಯ! 4,04,619 ಮತಗಳ ಭಾರೀ ಅಂತರದ ಗೆಲುವು!

0
ಚೊಚ್ಚಲ ಚುನಾವಣಾ ಸ್ಪರ್ಧೆಯಲ್ಲೇ ಪ್ರಿಯಾಂಕಾ ಗಾಂಧಿ ಭರ್ಜರಿ ಜಯ! 4,04,619 ಮತಗಳ ಭಾರೀ ಅಂತರದ ಗೆಲುವು!

ವಯನಾಡು, ನವೆಂಬರ್ 23: ತಮ್ಮ ಚೊಚ್ಚಲ ಚುನಾವಣಾ ಸ್ಪರ್ಧೆಯಲ್ಲೇ 4,04,619 ಮತಗಳ ಭಾರೀ ಅಂತರದೊಂದಿಗೆ ಕಾಂಗ್ರೆಸ್​ ನೇತೃತ್ವದ ಯುಡಿಎಫ್​ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಗೆಲವು ಸಾಧಿಸಿದ್ದಾರೆ.

ತಮ್ಮ ಚೊಚ್ಚಲ ಚುನಾವಣಾ ಸ್ಪರ್ಧೆಯಲ್ಲೇ ಈ ವರ್ಷದ ಆರಂಭದಲ್ಲಿ ವಯನಾಡು ಲೋಕಸಭಾ ಚುನಾವಣೆಯಲ್ಲಿ ತಮ್ಮ ಸಹೋದರ ರಾಹುಲ್​ ಗಾಂಧಿ ಅವರು ಗಳಿಸಿದ್ದ ಮತಗಳ ಅಂತರವನ್ನು ಮೀರಿ ಪ್ರಿಯಾಂಕಾ ಗಾಂಧಿ ಅವರು ವಿಜಯ ಪತಾಕೆ ಹಾರಿಸಿದ್ದಾರೆ.

ವಯನಾಡು ಕ್ಷೇತ್ರದಲ್ಲಿ ಒಟ್ಟು 16 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್​ ನೇತೃತ್ವದ ಯುಡಿಎಫ್​ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಫಲಿತಾಂಶದ ಮೇಲೆ ಇಡೀ ದೇಶದ ಚಿತ್ತ ನೆಟ್ಟಿತ್ತು. ಸಂಪೂರ್ಣ ಮತ ಎಣಿಕೆ ಬಳಿಕ ಪ್ರಿಯಾಂಕಾ ಗಾಂಧಿ ಅವರು 6,12,020 ಮತಗಳನ್ನು ಪಡೆದರೆ, ಸಿಪಿಐ(ಎಂ) ಅಭ್ಯರ್ಥಿ ಸತ್ಯನ್​ ಮೊಕೆರಿ ಅವರು 2,07,401 ಹಾಗೂ ಬಿಜೆಪಿಯ ನವ್ಯಾ ಹರಿದಾಸ್ 1,08,080 ಮತಗಳನ್ನು ಪಡೆದಿದ್ದಾರೆ.

ಈ ಮೂಲಕ ಸಿಪಿಐ(ಎಂ) ಅಭ್ಯರ್ಥಿ ವಿರುದ್ಧ 4,04,619 ಮತಗಳ ಅಂತರದಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಕಳೆದ ವಯನಾಡ್​ ಲೋಕಸಭಾ ಚುನಾವಣೆಯಲ್ಲಿ ರಾಹುಲ್​ ಗಾಂಧಿ ಅವರು 6,47,445 ಮತಗಳನ್ನು ಗಳಿಸಿ, 3,64,422 ಮತಗಳ ಅಂತರದಿಂದ ಸಿಪಿಐ ಅಭ್ಯರ್ಥಿ ಅನ್ನಿ ರಾಜ ಅವರ ವಿರುದ್ಧ ಜಯಗಳಿಸಿದ್ದರು. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ವಯನಾಡಿನಿಂದ ಸ್ಪರ್ಧಿಸಿದ್ದ ರಾಹುಲ್​ ಗಾಂಧಿ 7,06,367 ಮತಗಳನ್ನು ಪಡೆದು, 4,31,770 ಮತಗಳಿಂದ ಜಯಭೇರಿ ಬಾರಿಸಿದ್ದರು.

LEAVE A REPLY

Please enter your comment!
Please enter your name here