Home ಕರ್ನಾಟಕ “ಯತ್ನಾಳ ಒಬ್ಬ ನಾಲಾಯಕ್” ಅವನು ಚುನಾವಣೆಯಲ್ಲಿ ಸೋಲದೇ ಇದ್ರೆ ನಾನು ಪೀಠ ತ್ಯಾಗ; ಹುಲಸೂರು ಮಠದಶ್ರೀ ಭವಿಷ್ಯ!

“ಯತ್ನಾಳ ಒಬ್ಬ ನಾಲಾಯಕ್” ಅವನು ಚುನಾವಣೆಯಲ್ಲಿ ಸೋಲದೇ ಇದ್ರೆ ನಾನು ಪೀಠ ತ್ಯಾಗ; ಹುಲಸೂರು ಮಠದಶ್ರೀ ಭವಿಷ್ಯ!

0
“ಯತ್ನಾಳ ಒಬ್ಬ ನಾಲಾಯಕ್” ಅವನು ಚುನಾವಣೆಯಲ್ಲಿ ಸೋಲದೇ ಇದ್ರೆ ನಾನು ಪೀಠ ತ್ಯಾಗ; ಹುಲಸೂರು ಮಠದಶ್ರೀ ಭವಿಷ್ಯ!

ಬೆಂಗಳೂರು, ಡಿಸೆಂಬರ್ 03: ಮುಂದಿನ ಚುನಾವಣೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಸೋಲದೇ ಇದ್ರೆ ನಾನು ಪೀಠವನ್ನ ತ್ಯಾಗ ಮಾಡ್ತೇನೆ ಎಂದು ಬೀದರ್ ಜಿಲ್ಲೆ ಹುಲಸೂರು ಮಠದ ಶಿವಾನಂದ ಸ್ವಾಮೀಜಿ ಶಪಥ ಮಾಡಿದ್ದಾರೆ.

ಹುಲುಸೂರ ತಾಲ್ಲೂಕಿನಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವ ಹಾಗೂ ವಚನ ರಥೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

” ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡುವ ಯತ್ನಾಳ ಒಬ್ಬ ನಾಲಾಯಕ್. ಅವನಿಗೆ ನಾನೇನು ಹೆದರೋದಿಲ್ಲ. ನಾನೇ ಬಸವಣ್ಣ ಎಂದು ಹೇಳುತ್ತಿದ್ದಾನೆ ಆ ನಾಲಾಯಕ್ ಎಂದು ಗುಡುಗಿದ್ದಾರೆ.

ಇಲ್ಲಿ ಯಾರೂ ಬಸವಣ್ಣ ಅಲ್ಲ. 12ನೇ ಶತಮಾನದ ಬಸವಣ್ಣನವರಷ್ಟೆ ವಿಶ್ವಗುರು. ಬಸವಣ್ಣನವರ ಕುರಿತಾಗಿ ಯತ್ನಾಳ ಹಗುರವಾಗಿ ಮಾತನಾಡುತ್ತಿದ್ದಾನೆ. ಯತ್ನಾಳ ಒಬ್ಬನೇ ತೀಸ್ ಮಾರ್‌ ಖಾನ್ ಎಂಬಂತೆ ವರ್ತಿಸುತ್ತಿದ್ದಾನೆ ” ಎಂದು ಕಿಡಿಕಾರಿದ್ದಾರೆ.

LEAVE A REPLY

Please enter your comment!
Please enter your name here