Home ರಾಜಕೀಯ ‘ದೆಹಲಿ ದಂಗಲ್‌’ಗೆ ಮುಹೂರ್ತ ನಿಗದಿ! ಫೆ.5ರಂದು ಮತದಾನ; ಫೆ.8ರಂದು‌ ಫಲಿತಾಂಶ!

‘ದೆಹಲಿ ದಂಗಲ್‌’ಗೆ ಮುಹೂರ್ತ ನಿಗದಿ! ಫೆ.5ರಂದು ಮತದಾನ; ಫೆ.8ರಂದು‌ ಫಲಿತಾಂಶ!

0
‘ದೆಹಲಿ ದಂಗಲ್‌’ಗೆ ಮುಹೂರ್ತ ನಿಗದಿ! ಫೆ.5ರಂದು ಮತದಾನ; ಫೆ.8ರಂದು‌ ಫಲಿತಾಂಶ!

ದೆಹಲಿ, ಜನವರಿ 07 : ವಿಧಾನಸಭೆಯ ಚುನಾವಣೆ ದಿನಾಂಕ ಘೋಷಣೆಯಾಗಿದ್ದು ಫೆಬ್ರವರಿ 5ರಂದು ಮತದಾನ ನಡೆಯಲಿದ್ದು ಫೆಬ್ರವರಿ 8ರಂದು ಫಲಿತಾಂಶ ಪ್ರಕಟವಾಗಲಿದೆ.

ಇಂದು ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದು ಚುನಾವಣಾ ಆಯೋಗ ದೆಹಲಿ ವಿಧಾನಸಭೆ ಚುನಾವಣೆ 2025ರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ದೆಹಲಿಯ 70 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 5 ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಈ ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಉಪಸ್ಥಿತರಿದ್ದರು.ದೆಹಲಿ ವಿಧಾನಸಭಾ ಚುನಾವಣೆಯ ಮತದಾನದ ಜೊತೆಗೆ ಚುನಾವಣಾ ಆಯೋಗವು ಚುನಾವಣಾ ಫಲಿತಾಂಶದ ದಿನಾಂಕವನ್ನೂ ಪ್ರಕಟಿಸಿದೆ.

ಚುನಾವಣಾ ಆಯೋಗದ ಪ್ರಕಾರ, ದೆಹಲಿ ವಿಧಾನಸಭಾ ಚುನಾವಣೆಯ ಮತದಾನದ ಫಲಿತಾಂಶವನ್ನು ಫೆಬ್ರವರಿ 8 ರಂದು ಅಂದರೆ ಚುನಾವಣೆಯ 3 ದಿನಗಳ ನಂತರ ಪ್ರಕಟವಾಗಲಿದೆ.

LEAVE A REPLY

Please enter your comment!
Please enter your name here