Home ಕ್ರೈಮ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿತ; ದಂಗಾದ ಫ್ಯಾನ್ಸ್; ಮುಂದುವರಿದ ಚಿಕಿತ್ಸೆ ‌

ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿತ; ದಂಗಾದ ಫ್ಯಾನ್ಸ್; ಮುಂದುವರಿದ ಚಿಕಿತ್ಸೆ ‌

0
ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿತ; ದಂಗಾದ ಫ್ಯಾನ್ಸ್; ಮುಂದುವರಿದ ಚಿಕಿತ್ಸೆ   ‌

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ ಆಗಂತುಕ ನಟನಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟಬೆ ಮುಂಬೈನ ಬಾಂದ್ರಾ ನಿವಾಸದಲ್ಲಿ ನಡೆದಿದೆ.

ತಡರಾತ್ರಿ ಕಳ್ಳರು ಮನೆಗೆ ನುಗ್ಗಿದ್ದು, ಈ ವೇಳೆ ಸೈಫ್ ಅಲಿಖಾನ್ ಗೆ ಚಾಕುವಿನಿಂದ ಇರಿದಿದ್ದಾನೆ. ಸೈಫ್ ಅಲಿಖಾನ್ ಅವರಿಗೆ 6 ಕಡೆ ಗಂಭಿರ ಗಯಗಳಾಗಿದ್ದು, ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೈಫ್ ಅಲಿ ಖಾನ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು ಅವರ ದೇಹದಲ್ಲಿಯೇ ಹೊಕ್ಕಿದ್ದ ಚಾಕುವಿನ ಚೂರನ್ನು ವೈದ್ಯರು ಹೊರತೆಗೆದಿದ್ದಾರೆ ಎಂದು ತಿಳಿದುಬಂದಿದೆ.

ಸೈಫ್ ಅಲಿ ಖಾನ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಈ ನಡುವೆ ಬಾಂದ್ರಾ ಪೊಲೀಸರು ಸೈಫ್ ಅಲಿಖಾನ್ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದು, ಶಂಕಿತ ಮೂವರನ್ನು ಬಂಧಿಸಿದ್ದರೆ. ಮನೆ ಕೆಲಸದವರ ಮೇಲೆಯೇ ಅನುಮಾನ ಬಂದಿರುವ ಹಿನ್ನೆಲೆಯಲ್ಲಿ ಮೂವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here