
ಎಂ.ಕೆ. ಹುಬ್ಬಳ್ಳಿ, ಜನವರಿ 18: M. K. ಹುಬ್ಬಳ್ಳಿ ಮತ್ತು ಹೊಸಕಾದರವಳ್ಳಿ ಕ್ಲಸ್ಟರ್ಗಳ ಶಿಕ್ಷಕರಿಗಾಗಿ ಮಾರ್ಗನಕೊಪ್ಪ ಶಾಲೆಯಲ್ಲಿ ಭಾಷಾ ಶಿಕ್ಷಕರ ಆಪ್ತಸಮಾಲೋಚನಾ ಸಭೆ ನಡೆಯಿತು.
ಈ ಸಭೆಗೆ ಡಯಟ್ ಹಿರಿಯ ಉಪನ್ಯಾಸಕರಾದ S. M. ನದಾಫ್ ಸರ್ ಅವರು ಆಗಮಿಸಿ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.ಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ ಮಾರ್ಗನಕೊಪ್ಪ ಶಾಲೆಯ ಪ್ರಧಾನ ಗುರುಗಳು ಮತ್ತು ಸಿಬ್ಬಂದಿ ವರ್ಗವು ಭಾಗವಹಿಸಿದ್ದ ಎಲ್ಲ ಶಿಕ್ಷಕರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಿದರು.
ಕನ್ನಡ ಮತ್ತು ಇಂಗ್ಲಿಷ್ ವಿಷಯ ಸಂಪನ್ಮೂಲ ವ್ಯಕ್ತಿಗಳು ಸಭೆಯಲ್ಲಿ ತಮ್ಮ ಅಮೂಲ್ಯ ಮಾಹಿತಿಗಳನ್ನು ಹಂಚಿಕೊಂಡರು.ಈ ಸಭೆಗೆ M. K. ಹುಬ್ಬಳ್ಳಿ ಮತ್ತು ಹೊಸಕಾದರವಳ್ಳಿ ಕ್ಲಸ್ಟರ್ಗಳ ವೃತ್ತಿಭಾಂದವರು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು.
ಸಭೆಯಲ್ಲಿ ಚರ್ಚೆ ಮಾಡಲಾದ ವಿವಿಧ ವಿಷಯಗಳು ಮತ್ತು ನೀಡಲಾದ ಮಾರ್ಗದರ್ಶನವು ಶಿಕ್ಷಕರ ವೃತ್ತಿಪರ ಪ್ರಗತಿಗೆ ಸಹಾಯಕವಾಯಿತು.2 ಕ್ಲಸ್ಟರ್ಗಳ ಪರವಾಗಿ ಈ ಸಭೆಯನ್ನು ಯಶಸ್ವಿಯಾಗಿ ನೆರವೇರಿಸಿದ ಎಲ್ಲಾ ಶಿಕ್ಷಕರಿಗೆ, ಪ್ರಧಾನ ಗುರುಗಳಿಗೆ, ಸಂಪನ್ಮೂಲ ವ್ಯಕ್ತಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಹೃದಯಪೂರ್ವಕ ಧನ್ಯವಾದಗಳು ಸಲ್ಲಿಸಲಾಯಿತು.