Home ಕರ್ನಾಟಕ “ಏಪ್ರಿಲ್ ತಿಂಗಳಿನಿಂದ 10 ಸಾವಿರ ಮುಂಗಡ” ಆಶಾ ಕಾರ್ಯಕರ್ತೆಯರಿಗೆ New Year Gift! ಗುಂಡೂರಾವ್ ಏನೆಲ್ಲ ಹೇಳಿದರು?

“ಏಪ್ರಿಲ್ ತಿಂಗಳಿನಿಂದ 10 ಸಾವಿರ ಮುಂಗಡ” ಆಶಾ ಕಾರ್ಯಕರ್ತೆಯರಿಗೆ New Year Gift! ಗುಂಡೂರಾವ್ ಏನೆಲ್ಲ ಹೇಳಿದರು?

0
“ಏಪ್ರಿಲ್ ತಿಂಗಳಿನಿಂದ 10 ಸಾವಿರ ಮುಂಗಡ” ಆಶಾ ಕಾರ್ಯಕರ್ತೆಯರಿಗೆ New Year Gift! ಗುಂಡೂರಾವ್ ಏನೆಲ್ಲ ಹೇಳಿದರು?

ದಕ್ಷಿಣ ಕನ್ನಡ, ಜನವರಿ 19: ಆಶಾ ಕಾರ್ಯಕರ್ತೆಯರಿಗೆ ಏಪ್ರಿಲ್ ತಿಂಗಳಿನಿಂದ 10 ಸಾವಿರ ಮುಂಗಡವಾಗಿ ನೀಡಲು ಈಗಾಗಲೇ ತೀರ್ಮಾನಿಸಲಾಗಿದೆ. ರಾಜ್ಯ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ಹೆಚ್ಚಿನ ಸಹಕಾರ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಆಶಾ ಕಾರ್ಯಕರ್ತೆಯರಿಗೆ ಏಪ್ರಿಲ್ ತಿಂಗಳಿನಿಂದ 10 ಸಾವಿರ ಮುಂಗಡವಾಗಿ ನೀಡಲು ಈಗಾಗಲೇ ತೀರ್ಮಾನಿಸಲಾಗಿದೆ.

ಆದರೆ ಕೇಂದ್ರ ಸರ್ಕಾರ ಗೌರವಧನ ಹೆಚ್ಚಿಸುವ ಕಾರ್ಯ ಮಾಡಬೇಕು. ನೀವು, ನಿಮ್ಮ ಸಂಸದರು ಕೇಂದ್ರದಲ್ಲಿ ಪ್ರಭಾವ ಬಳಸಿ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ವಿಸುವಂತೆ ಒತ್ತಾಯಿಸಿ ಎಂದು ಶಾಸಕ ಹರೀಶ್ ಪುಂಜಾ ಅವರಿಗೆ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದರು.

ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ 5 ಸಾವಿರ ಗೌರವಧನ ನೀಡುತ್ತಿದೆ. ಕೇಂದ್ರ ಸರ್ಕಾರ 3 ಸಾವಿರ ನೀಡುತ್ತಿದ್ದು , ಅದರಲ್ಲೂ ಶೇ 40 ರಷ್ಟು ಪಾಲನ್ನ ರಾಜ್ಯ ಸರ್ಕಾರವೇ ಭರಿಸುತ್ತಿದೆ. ಪ್ರತಿ ಬಾರಿ ರಾಜ್ಯ ಸರ್ಕಾರ ಗೌರವಧನ ಹೆಚ್ಚಳ ಮಾಡಿಕೊಂಡು ಬರುತ್ತಿದೆ. ಆದರೆ ಕೇಂದ್ರ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳವಾಗಿಯೇ ಇಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

LEAVE A REPLY

Please enter your comment!
Please enter your name here