
ಬೆಳಗಾವಿ, ಡಿಸೆಂಬರ್ 10: ಬಾಣಂತಿಯರು, ಶಿಶುಗಳು ಸಾವಿನ ಪ್ರಕರಣದಲ್ಲಿ ಬೆಳಗಾವಿ ಬಿಮ್ಸ್ ಹೆಸರು ಕೂಡ ಸುದ್ದಿಯಲ್ಲಿದೆ. ಹೀಗಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಬಿಮ್ಸ್ ಗೆ ಇವತ್ತು ಭೇಟಿ ನೀಡಿದರು.
ಆಸ್ಪತ್ರೆಯ ಎಲ್ಲ ವಾರ್ಡ್ ಗಳಲ್ಲಿ ಹೋಗಿ ರೋಗಿಗಳ ಅರೋಗ್ಯ ವಿಚಾರಿಸಿದರು. ವಿಶೇಷವಾಗಿ ಹೆರಿಗೆ ವಿಭಾಗಕ್ಕೆ ತೆರಳಿ ಬಾಣಂತಿಯರು, ಶಿಶುಗಳು ಅರೋಗ್ಯ ವಿಚಾರಿಸಿದ ಕಾರ್ಯದರ್ಶಿ ಶಾಲಿನಿ ರಜನೀಶ್ ಔಷದೋಪಚಾರದ ಕುರಿತು ಅಧಿಕಾರಿಗಳು ಮತ್ತು ಬಾಣಂತಿಯರಿಂದ ಮಾಹಿತಿ ಕಲೆಹಾಕಿದರು.
ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಧಿಕಾರಿ ಸೇರಿದಂತೆ ವೈದ್ಯಕೀಯ ಇಲಾಖೆ ಅಧಿಕಾರಿಗಳು ಶಾಲಿನಿಯವರಿಗೆ ಈ ವೇಳೆ ಮಾಹಿತಿ ನೀಡಿದರು.
‘