
ಆಂಧ್ರ ಪ್ರದೇಶ: ತೆಲುಗಿನಲ್ಲಿ ಡ್ರಗ್ಸ್ ತೆಗೆದುಕೊಳ್ಳುವ ಕಲಾವಿದರ ಮೇಲೆ ಬ್ಯಾನ್ ಹೇರಲು ಚಿತ್ರರಂಗದವರು ನಿರ್ಧರಿಸಿದ್ದಾರೆ. ಈ ನಿರ್ಧಾರವನ್ನು ಅನೇಕರು ಸ್ವಾಗತಿಸಿದ್ದಾರೆ. ಇದರಿಂದ ಚಿತ್ರರಂಗದಲ್ಲಿ ಮಹತ್ವದ ಬದಲಾವಣೆಯನ್ನು ನಿರೀಕ್ಷಿಸಲಾಗುತ್ತಿದೆ.
ಯಾರೆಲ್ಲ ಡ್ರಗ್ಸ್ ತೆಗೆದುಕೊಳ್ಳುತ್ತಾರೋ ಅವರ ಮೇಲೆ ಬ್ಯಾನ್ ಹೇರಳು ಮಲಯಾಳಂ ಚಿತ್ರರಂಗದವರು ನಿರ್ಧರಿಸಿದ್ದಾರೆ. ನಾವು ಇದೇ ರೀತಿಯ ನಿಯಮ ತರಲು ಆಲೋಚಿಸಿದ್ದೇವೆ. ನಾನು ಚಿತ್ರರಂಗದ ಜೊತೆ ಈ ಬಗ್ಗೆ ಚರ್ಚಿಸುತ್ತೇನೆ. ನಾವು ಡ್ರಗ್ ಬಳಕೆ ಮಾಡುವವರಿಗೆ ಕಠಿಣ ಸಂದೇಶ ಕಳಿಸಬೇಕಿದೆ’ ಎಂದು ದಿಲ್ ರಾಜು ಹೇಳಿದ್ದಾರೆ.
ಇದರಿಂದ ಚಿತ್ರರಂಗದ ಹೆಸರು ಹಾಳಾಗುತ್ತಿದೆ. ಕನ್ನಡದಲ್ಲೂ ಈ ನಿಯಮ ಜಾರಿಗೆ ಬರಬೇಕು ಎಂದು ಅನೇಕರು ಒತ್ತಾಯ ಮಾಡುತ್ತಿದ್ದಾರೆ.