Home ರಾಷ್ಟೀಯ ISRO ಡಾಕಿಂಗ್ ಪ್ರಯೋಗ ಯಶಸ್ವಿ! ಗಣ್ಯರ ಅಭಿನಂದನೆ

ISRO ಡಾಕಿಂಗ್ ಪ್ರಯೋಗ ಯಶಸ್ವಿ! ಗಣ್ಯರ ಅಭಿನಂದನೆ

0
ISRO ಡಾಕಿಂಗ್ ಪ್ರಯೋಗ ಯಶಸ್ವಿ! ಗಣ್ಯರ ಅಭಿನಂದನೆ

ಬೆಂಗಳೂರು, ಜನವರಿ 16: ಮತ್ತೊಂದು ಮಹತ್ವದ ಹೆಗ್ಗುರುತು ಸಾಧನೆಯಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸ್ಪಾಡೆಕ್ಸ್ ಮಿಷನ್ ಅಡಿಯಲ್ಲಿ ದೇಶದ ಮೊದಲ ಉಪಗ್ರಹ ಡಾಕಿಂಗ್ ಪ್ರಯೋಗವನ್ನು ಯಶಸ್ವಿಯಾಗಿ ಇಂದು ಗುರುವಾರ ಪೂರ್ಣಗೊಳಿಸಿತು.

ಕಳೆದ ವರ್ಷಾಂತ್ಯ ಡಿಸೆಂಬರ್ 30ರಂದು ಪಿಎಸ್ ಎಲ್ ವಿ-ಸಿ60 ರಾಕೆಟ್‌ನಲ್ಲಿ ಉಡಾವಣೆಯಾದ ಎರಡು ಉಪಗ್ರಹಗಳಾದ SDX01 ಮತ್ತು SDX02 ಡಾಕಿಂಗ್‌ನಲ್ಲಿ ಒಳಗೊಂಡಿತ್ತು. ಬಹು ಪ್ರಯತ್ನಗಳ ನಂತರ ಉಪಗ್ರಹಗಳನ್ನು ಯಶಸ್ವಿಯಾಗಿ ಡಾಕಿಂಗ್ ಮಾಡಲಾಯಿತು, ಇದು ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಐತಿಹಾಸಿಕ ಮೈಲಿಗಲ್ಲನ್ನು ಗುರುತಿಸಿದೆ.

ಬಾಹ್ಯಾಕಾಶನೌಕೆ ಡಾಕಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ! ಇದು ಒಂದು ಐತಿಹಾಸಿಕ ಕ್ಷಣ” ಎಂದು ಇಸ್ರೊ ಪ್ರಕಟಿಸಿದೆ. ಇದರಲ್ಲಿ ಉಪಗ್ರಹಗಳನ್ನು 15 ಮೀಟರ್ ದೂರದಿಂದ 3 ಮೀಟರ್ ಹೋಲ್ಡ್ ಪಾಯಿಂಟ್‌ಗೆ ಸ್ಥಳಾಂತರಿಸುವುದು, ಡಾಕಿಂಗ್ ನ್ನು ಪ್ರಾರಂಭಿಸುವುದು ಮತ್ತು ಬಾಹ್ಯಾಕಾಶ ನೌಕೆ ಸೆರೆಹಿಡಿಯುವಿಕೆಯನ್ನು ಸಾಧಿಸುವುದು ಸೇರಿವೆ. ಹಿಂತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸರಾಗವಾಗಿ ಪೂರ್ಣಗೊಳಿಸಲಾಯಿತು, ನಂತರ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲಾಯಿತು.

LEAVE A REPLY

Please enter your comment!
Please enter your name here