Home ಕರ್ನಾಟಕ “EX CMನ ಅದೊಂದು video ತೋರಿಸಿ ಮುನಿರತ್ನ ಮಂತ್ರಿ ಆದ” ಬಿಜೆಪಿ ಶಾಸಕನ ವಿರುದ್ಧ ಸಂತ್ರಸ್ತೆ ಗಂಭೀರ ಆರೋಪ

“EX CMನ ಅದೊಂದು video ತೋರಿಸಿ ಮುನಿರತ್ನ ಮಂತ್ರಿ ಆದ” ಬಿಜೆಪಿ ಶಾಸಕನ ವಿರುದ್ಧ ಸಂತ್ರಸ್ತೆ ಗಂಭೀರ ಆರೋಪ

0
“EX CMನ ಅದೊಂದು video ತೋರಿಸಿ ಮುನಿರತ್ನ ಮಂತ್ರಿ ಆದ” ಬಿಜೆಪಿ ಶಾಸಕನ ವಿರುದ್ಧ ಸಂತ್ರಸ್ತೆ ಗಂಭೀರ ಆರೋಪ

ಬೆಂಗಳೂರು, ಅಕ್ಟೋಬರ್ 09: ಮುನಿರತ್ನ ಮಾಜಿ ಮುಖ್ಯಮಂತ್ರಿ ಒಬ್ಬರನ್ನು ಹನಿಟ್ರ್ಯಾಪ್ ಮಾಡಿಸಿದ್ದಾರೆ. ಮುನಿರತ್ನ ಬಳಿ ಮಾಜಿ ಮುಖ್ಯಮಂತ್ರಿಗಳ ವಿಡಿಯೋ‌ ಇದೆ. ‘ಆ ವಿಡಿಯೋ ತೋರಿಸಿ’ ಬ್ಲ್ಯಾಕ್​ಮೇಲ್ ಮಾಡಿಯೇ ಮುನಿರತ್ನ ಮಂತ್ರಿ ಸ್ಥಾನ ಪಡೆದುಕೊಂಡಿದ್ದರು. ಅವರ ಕೃತ್ಯಗಳನ್ನು ಸಹಿಸಲಾರದೆ ದೂರು ದಾಖಲಿಸಿದ್ದೇವೆ ಎಂದಿದ್ದಾರೆ ಸಂತ್ರಸ್ತೆ.

ಬೆಂಗಳೂರಿನ ರಾಜಭವನ ರಸ್ತೆಯ ಖಾಸಗಿ ಹೋಟೆಲ್​​ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂತ್ರಸ್ತೆ, ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ.

2020ರಲ್ಲಿ ಬಿಜೆಪಿ ಶಾಸಕ ಮುನಿರತ್ನ ಮಮತಾ, ವೆಂಕಟೇಶ್ ಎಂಬುವರ ಮೂಲಕ ಪರಿಚಯವಾಗಿದ್ದರು. ಮುನಿರತ್ನ ನನಗೆ ವಿಡಿಯೋ ಕರೆ ಕೂಡ ಮಾಡಿದ್ದಾರೆ. ಒಂದು ದಿನ ಗೋದಾಮಿನ ಬಳಿ ಕರೆದುಕೊಂಡು ಹೋಗಿ ಅಲ್ಲಿ ನನ್ನನ್ನು ಹೆದರಿಸಿ ಅತ್ಯಾಚಾರ ಮಾಡಿದ್ದಾರೆ. ಅವರು ಜಾಮೀನು ಪಡೆದು ಬಂದ ಮೇಲೆ ನನಗೆ ಜೀವ ಭಯ ಇದೆ ಎಂದು ಸಂತ್ರಸ್ತೆ ಹೇಳಿದ್ದಾರೆ.

LEAVE A REPLY

Please enter your comment!
Please enter your name here